ಉಡುಪಿ: ಪ್ರಸಿದ್ಧ ನಾಟಿ ವೈದ್ಯ ನಿಟ್ಟೂರು ಶ್ರೀನಿವಾಸ ಪೂಜಾರಿ ನಿಧನ

Share with

ಉಡುಪಿ: ಪ್ರಸಿದ್ಧ ನಾಟಿ ವೈದ್ಯ ನಿಟ್ಟೂರು ಶ್ರೀನಿವಾಸ ಪೂಜಾರಿ (68) ಫೆ.5ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಸಿದ್ಧ ನಾಟಿ ವೈದ್ಯ ನಿಟ್ಟೂರು ಶ್ರೀನಿವಾಸ ಪೂಜಾರಿ

ಕಳೆದ ಕೆಲವು ಸಮಯಗಳಿಂದ ಅನಾರೊಗ್ಯದಿಂದ ಬಳಲುತ್ತಿದ್ದರು. ದಿಢೀರ್ ಅಸ್ವಸ್ಥಗೊಂಡ ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ನಾಟಿ ಮದ್ದಿನ ಮೂಲಕ ಪ್ರಸಿದ್ದರಾಗಿದ್ದ ಶ್ರೀನಿವಾಸ ಪೂಜಾರಿಯವರ ಬಳಿ ರಾಜ್ಯದ ಮೂಲೆ ಮೂಲೆಗಳಿಂದ ಜನರು ಆಗಮಿಸಿ ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿದ್ದ ಅವರು ಹಲವು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.


Share with

Leave a Reply

Your email address will not be published. Required fields are marked *