ದರ್ಶನ್ ಆರೋಪಿಯಾಗಿರುವ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 12 ಪ್ರಮುಖ ಸಾಕ್ಷಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.


ಅವುಗಳನ್ನು ಮಾಧ್ಯಮಗಳು ವರದಿ ಮಾಡಿವೆ.
1. ಎ1 ಆರೋಪಿ ಪವಿತ್ರಾಗೌಡ ಮನೆಯ ಸಿಸಿಟಿವಿ ಡಿವಿಆರ್ ರಿಟ್ರೇವ್ ಮಾಡಿದ ಎಫ್‌ಎಎಲ್ ಅಧಿಕಾರಿ CRPC 164 ಅಡಿ ಹೇಳಿಕೆ ನೀಡಿದ್ದಾರೆ.
2. A2 ಆರೋಪಿ ದರ್ಶನ್ ಮನೆಯ ಡಿವಿಆರ್ ರಿಟ್ರೇವ್ ಮಾಡಿದ ಎಫ್‌ಎಸ್ಎಲ್ ಅಧಿಕಾರಿಗಳ ಹೇಳಿಕೆ ದಾಖಲು.
3. ಶವ ಸಾಗಿಸಿದ ಸ್ಕಾರ್ಪಿಯೋ ವಾಹನದ ಮಾಲೀಕನ ಹೇಳಿಕೆ.
4. ಪಟ್ಟಣಗೆರೆ ಶೆಡ್‌ನ ಗುತ್ತಿಗೆದಾರನ ಹೇಳಿಕೆ.
5. ರೇಣುಕಾಸ್ವಾಮಿ ಕಿಡ್ನಾಪ್ ಮಾಡಿದ್ದ ಕಾರು ಚಾಲಕನ ಹೇಳಿಕೆ.
6. ರೇಣುಕಾಸ್ವಾಮಿಯನ್ನು ಹಲ್ಲೆ ಮಾಡಿದ ಬಳಿಕ ಪೋಟೋಗಳನ್ನು ಒರ್ವ ವ್ಯಕ್ತಿಗೆ ಕಳುಹಿಸಿದ್ದು, ಆತನ ಹೇಳಿಕೆ ಪಡೆಯಲಾಗಿದೆ.
7. ಮೃತದೇಹ ಬಿಸಾಡಿದ ಬಳಿಕ ಆರೋಪಿಗಳಾದ ಕಾರ್ತಿಕ್, ನಿಖಿಲ್ ಆಟೋದಲ್ಲಿ ನಾಯಂಡಹಳ್ಳಿವರೆಗೂ ಬಂದಿದ್ದು ಈ ವೇಳೆ ಡ್ರಾಪ್ ಮಾಡಿದ್ದ ಆಟೋ ಚಾಲಕನ ಹೇಳಿಕೆ.
8. ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಎಂಬಾತನ ಹೇಳಿಕೆ.
9. ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡ್ತಾ ಇದ್ದ ಪ್ರವೀಣ್ ಎಂಬಾತನ ಹೇಳಿಕೆ.
10.ಆರೋಪಿಗಳ ಸಂಪರ್ಕದಲ್ಲಿ ಇದ್ದ ಮುತ್ತುರಾಜ್ ಎಂಬಾತನ ಹೇಳಿಕೆ.
11. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಲ್ಲಿ ಕಿಡ್ನಾಪ್ ಮಾಡಿದ್ದಾಗ ಬಳಸಲಾಗಿದ್ದ ಆಟೋ ಚಾಲಕನ ಹೇಳಿಕೆ.
12. ಜೂನ್ 8ರಂದು ಶೆಡ್‌ನಲ್ಲಿ ಇದ್ದ ಸೆಕ್ಯುರಿಟಿ ಗಾರ್ಡ್ ಹೇಳಿಕೆ.
ಇಷ್ಟು ಬಲವಾದ ಸಾಕ್ಷಿಗಳನ್ನು ಆಧರಿಸಿ ಪೊಲೀಸರು ಚಾರ್ಜ್ ಶೀಟ್ ರೂಪಿಸಿದ್ದು, ಕೆಲವೇ ದಿನಗಳಲ್ಲಿ ಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.




