ಮಂಜೇಶ್ವರ: ಶ್ರೀ ಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರ ಕಣ್ವ ತೀರ್ಥದ ಸಂಪೂರ್ಣ ಜೀರ್ಣೋದ್ಧಾರ ಕಾರ್ಯವನ್ನು ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ ಅನುಗ್ರಹ ದೊಂದಿಗೆ ಸಂಪೂರ್ಣ ಮಾಡಿ ದೇವರಿಗೆ ಸಮರ್ಪಿಸಿದ ಈ ಸಂದರ್ಭದಲ್ಲಿ ಜೀಣೋದ್ಧಾರದ ನೇತ್ರತ್ವವಹಿಸಿದ ಅರಿಬೈಲು ನೆತ್ಯ ಗೋಪಾಲ ಶೆಟ್ಟಿ ದಂಪತಿಗಳನ್ನು ಮತ್ತು ಅವರ ಮಗ ಸಿವಿಲ್ ಇಂಜಿನಿಯರ್ ಆದರ್ಶ ಶೆಟ್ಟಿಯವರನ್ನು ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಸನ್ಮಾನಿಸಿದರು. ಗೋಪಾಲ ಶೆಟ್ಟಿಯವರಿಗ ಫಲ ಪುಷ್ಪ ಮತ್ತು ಬಂಗಾರದ ಕಡಗವನ್ನು ಕೊಟ್ಟು ಗೌರವಿಸಿದರು.