ನಿವೃತ್ತ ಮುಖ್ಯೋಪಧ್ಯಾಯ ಕೋಟಿ  ಪೂಜಾರಿ ನಿಧನ

Share with


ಪೈವಳಿಕೆ: ಚಿಪ್ಪಾರು ಅಮ್ಮೇರಿ ನಿವಾಸಿ ನಿವೃತ್ತ ಮುಖ್ಯೋಪಧ್ಯಾಯ ಕೋಟಿ ಪೂಜಾರಿ [77] ನಿಧನರಾದರು. ಇವರಿಗೆ ಶನಿವಾರ ಬೆಳಿಗ್ಗೆ ಮನೆಯಲ್ಲಿ ಹೃದಯಘಾತ ಉಂಟಾಗಿದ್ದು, ಉಪ್ಪಳ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನಹೊಂದಿದ್ದಾರೆ. ಇವರು ಪೈವಳಿಕೆ ಸರಕಾರಿ ಶಾಲೆಯಲ್ಲಿ ಮುಖ್ಯೋಪಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಕೆ.ಎಸ್.ಎಸ್.ಪಿ.ಯು ಪೈವಳಿಕೆ ಘಟಕದ  ಸದಸ್ಯರಾಗಿದ್ದಾರೆ.  ಚಿಪ್ಪಾರು ಅಮ್ಮೇರಿ ಶ್ರೀ ಧೂಮಾವತೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಹಲವು ವರ್ಷಗಳ ಕಾಲ ಸೇವೆಗೈದಿದ್ದರು. ಅಮ್ಮೇರ ಕೊಟ್ಯ ಆರ್ಟ್್ಸ ಎಂಡ್ ಸ್ಪೋಟ್ಸ್ ಕ್ಲಬ್‌ನ ಗೌರವಾಧ್ಯಕ್ಷರಾಗಿದ್ದರು.  ಮೃತರು ಪತ್ನಿ ಅರುಣ, ಮಕ್ಕಳಾದ ಯಶೋದ, ಉದಯ ಕುಮಾರ್, ಶ್ರೀಧರ, ರಮ್ಯ, ರೋಹಿತ್, ಮುಖೇಶ್, ಸೊಸೆಯಂದಿರಾದ ಜಯಂತಿ, ಲೋಲಾಕ್ಷಿ, ಸೌಮ್ಯ, ಅಳಿಯ ಆನಂದ, ಸಹೋದರರಾದ ದೇರಣ್ಣ, ರಮೇಶ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಅಳಿಯ ಗಿರಿಧರ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಸoಸ್ಕಾರ ಭಾನುವಾರ ಮನೆ ಬಳಿಯಲ್ಲಿ ನಡೆಯಿತು.ನಿಧನಕ್ಕೆ ಕೆ.ಎಸ್.ಎಸ್.ಪಿ.ಯು ಪೈವಳಿಕೆ ಘಟಕ ಸಂತಾಪ ಸೂಚಿಸಿದೆ.


Share with

Leave a Reply

Your email address will not be published. Required fields are marked *