ಉಡುಪಿ : ಉಡುಪಿ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಅನುವಂಶೀಯ ಮೊಕ್ತೆಸರ ಪ್ರತಿಷ್ಠಿತ ಮನೆತನದ ಕಕ್ಕುಂಜಿ ಮೇಲ್ಮನೆ ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕರಾದ ಪಿ. ಬಾಲಕೃಷ್ಣ ಶೆಟ್ಟಿ (ಪೆರಂಪಳ್ಳಿ ಕಕ್ಕುಂಜಿ ಮೇಲ್ಮನೆ) ಅವರು ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಅವರು ಶಿಸ್ತು, ಸರಳತೆ ಹಾಗೂ ಮಾನವೀಯ ಮೌಲ್ಯಗಳಿಗೆ ಹೆಸರುವಾಸಿಯಾಗಿದ್ದರು. ಅವರ ನಿಧನಕ್ಕೆ ಪೆರಂಪಳ್ಳಿ ಕಕ್ಕುಂಜೆಯ ಊರಪರ ಊರ ಹಿತೈಷಿಗಳು, ಅಭಿಮಾನಿಗಳು, ಬಂಧುಬಾಂಧವರು ಹಾಗೂ ಮಿತ್ರರು ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದಾರೆ.





