ಪೆರ್ಲ : ಅಂಚೆ ಇಲಾಖೆಯ ನಿವೃತ್ತ ಪೋಸ್ಟು ಮಾಸ್ಟರ್ ಪಜ್ಜಾನ ಬಳಿಯ ಪಾಯಿತ್ತಡ್ಕ ನಿವಾಸಿ ಪೂವಪ್ಪ (75) ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾದರು.
ಇವರು ಮನೆ ಸಮೀಪ ಗದ್ದೆಗೆ ತೆರಳಿದ್ದ ವೇಳೆ ತೀವ್ರ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಉದ್ಯೋಗ ಆರಂಭ ಕಾಲದಲ್ಲಿ ಪೋಸ್ಟು ಮೆನ್ ಆಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ಅ ಬಳಿಕ ಪೋಸ್ಟು ಮಾಸ್ಟರ್ ಆಗಿ ಭಡ್ತಿ ಹೊಂದಿ ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ ವಿವಿದ ಅಂಚೆ ಕಚೇರಿಗಳಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಮಂಗಲ್ಪಾಡಿ ಅಂಚೆ ಕಚೇರಿಯಿಂದ ನಿವೃತ್ತರಾಗಿದ್ದರು.
ಮೃತರು ಕಾಂಗ್ರೆಸ್ ಪಕ್ಷದ ಅಪ್ಪಟ ಅಭಿಮಾನಿಯಾಗಿದ್ದು ಎಣ್ಮಕಜೆ ಮಂಡಲ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾಗಿ ಸಾಮಾಜಿಕ ಸೇವಾ ನಿರತರಾಗಿದ್ದರು. ಎಣ್ಮಕಜೆ ಗ್ರಾಮ ಪಂಚಾಯತಿನ ಶೇಣಿ ವಾರ್ಡಿನ ಅಭಿವೃದ್ಧಿ ಕಾರ್ಯಗಳ ವರ್ಕಿಂಗ್ ಗ್ರೂಪ್ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದರು.ಮೃತರು ಪತ್ನಿ ದೇವಕಿ ಮಕ್ಕಳಾದ ಚಂದ್ರಪ್ರಕಾಶ, ರವಿಚಂದ್ರ,ಪ್ರವೀಣ್ ಕುಮಾರ್, ಚಂದ್ರಾವತಿ ಎಂಬಿವರನ್ನಗಲಿದ್ದಾರೆ.
ಮೃತರ ನಿಧನಕ್ಕೆ ಡಿಸಿಸಿ ಪ್ರಧಾನ ಕಾರ್ಯದರ್ಶಿ, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಗಾಂಭೀರ್,ಕಾಂಗ್ರೆಸ್ ಶೇಣಿ ವಾರ್ಡ್ ಘಟಕ ಸಂತಾಪ ವ್ಯಕ್ತಪಡಿಸಿದೆ.