ಧರ್ಮತಡ್ಕ ಶಾಲೆಯಲ್ಲಿ ಉಪಜಿಲ್ಲಾ ಕಲೋತ್ಸವದ ಅವಲೋಕನಾ ಸಭೆ..

Share with

ನ.7 ರಿಂದ 10ರ ವರೆಗೆ ಧರ್ಮತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ 62 ನೇ ಕೇರಳ ರಾಜ್ಯ ಉಪಜಿಲ್ಲಾ ಶಾಲಾ ಕಲೋತ್ಸವದ ಅವಲೋಕನಾ ಸಭೆ ನ.1ರಂದು ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು.

ಉಪಜಿಲ್ಲಾ ಕಲೋತ್ಸವದ ಅವಲೋಕನಾ ಸಭೆ.

ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಇಲ್ಲಿಯ ತನಕದ ಪ್ರಗತಿಯನ್ನು ಶ್ಲಾಘಿಸಿದರು. ಕಲೋತ್ಸವದ ಯಶಸ್ಸಿಗಾಗಿ ರಚಿಸಿದ ಎಲ್ಲಾ 9 ಉಪಸಮಿತಿಗಳ ಕನ್ವೀನರ್ ತಮ್ಮ ಸಮಿತಿಯ ಪ್ರಗತಿಯನ್ನು ಮಂಡಿಸಿದರು. ಶಾಲಾ ವ್ಯವಸ್ಥಾಪಕ ಶಂಕರ ನಾರಾಯಣ ಭಟ್, ಹೈಸ್ಕೂಲ್ ಮುಖ್ಯೋಪಾಧ್ಯಾಯ ಗೋವಿಂದ ಭಟ್, ಯು.ಪಿ ಮುಖ್ಯೋಪಾಧ್ಯಾಯ ಮಹಾಲಿಂಗಭಟ್, ಎಚ್.ಎಂ ಫೋರಂ ಸೆಕ್ರೆಟರಿ ಶಾಮ ಭಟ್, ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ , ಸ್ಥಳೀಯ ಆರೋಗ್ಯಾಧಿಕಾರಿ ತಿರುಮಲೇಶ್, ಶಂಕರ ರಾವ್ ಕಕ್ವೆ, ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗಾಗಿ ಸೂಕ್ತ ಮಾರ್ಗದರ್ಶನ ಇತ್ತರು. ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿ, ಸತ್ಯನಾರಾಯಣ ಭಟ್ ವಂದಿಸಿದರು. ಶ್ರೀಮತಿ ಉಮಾದೇವಿ ನಿರೂಪಿಸಿದರು.


Share with

Leave a Reply

Your email address will not be published. Required fields are marked *