ಉಡುಪಿ : ಇತ್ತೀಚೆಗಷ್ಟೇ ನಿಧನರಾದ ʻಕಾಮಿಡಿ ಕಿಲಾಡಿʼ ಸೀಸನ್ 3 ವಿನ್ನರ್, ಕನ್ನಡದ ಕಿರುತೆರೆಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಅವರ ನಿವಾಸಕ್ಕೆ ಡಿವೈನ್ ನಟ ರಿಷಭ್ ಶೆಟ್ಟಿ ದಂಪತಿ ಭೇಟಿ ನೀಡಿದ್ದಾರೆ.
ರಿಷಬ್ ಶೆಟ್ಟಿ ಹಾಗೂ ಪ್ರಗತಿ ರಿಷಬ್ ಶೆಟ್ಟಿ ಅವರು ಇಂದು ನೀಡಿ ರಾಕೇಶ್ ಅವರ ತಾಯಿ ಮತ್ತು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ರಾಕೇಶ್ ತಂಗಿ ಮದುವೆಗೂ ಆರ್ಥಿಕ ಸಹಾಯ ಮಾಡಿದ್ದಾರೆ. ಮುಂದಿನ ದಿನದಲ್ಲಿ ನಿರ್ಮಾಣವಾಗುವ ರಾಕೇಶ್‌ನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಸದಾಕಾಲ ಕುಟುಂಬದೊಂದಿಗೆ ನಾನಿದ್ದೇನೆ ಎನ್ನುವ ಭರವಸೆಯನ್ನೂ ರಿಷಭ್ ಶೆಟ್ಟಿ ನೀಡಿದ್ದಾರೆ.