ಸಿಎಸ್ ಕೆಯಲ್ಲಿ ಧೋನಿ ಜಾಗಕ್ಕೆ ಬರಲಿದ್ದಾರಾ ರಿಷಭ್ ಪಂತ್?

Share with

ಚೆನ್ನೈ: ಐಪಿಎಲ್ (IPL) ಕ್ರಿಕೆಟ್ ನಲ್ಲಿ ಹರಾಜು ಯಾವಾಗಲೂ ಭಾರೀ ನಿರೀಕ್ಷೆ ಹುಟ್ಟು ಹಾಕುವುದು ಸಹಜ. ಮೆಗಾ-ಹರಾಜು ಬಂದಾಗಲೆಲ್ಲಾ ಅದರ ವಿಚಾರದ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರವಾಗಿ ಹೆಚ್ಚುತ್ತದೆ.

ಸದ್ಯ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ರಿಷಭ್ ಪಂತ್(Rishabh Pant) ಅವರು ಸುದ್ದಿಯಾಗುತ್ತಿದ್ದಾರೆ. ಅದಕ್ಕೆ ಕಾರಣವಾಗಿದ್ದು ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದಿಗ್ಗಜ ಮಹೇಂದ್ರ ಸಿಂಗ್ ಧೋನಿ(MS Dhoni)ಅವರ ಜಾಗಕ್ಕೆ ಬರಲಿದ್ದಾರಾ ಎನ್ನುವ ವದಂತಿಗಳು ಹರಿದಾಡುತ್ತಿವೆ. ಇದಕ್ಕೆ ಇಂಬು ನೀಡುವಂತೆ ಪಂತ್ ಮಂಗಳವಾರ(ಆ.20) ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಸೂಪರ್‌ಸ್ಟಾರ್ ರಜನಿಕಾಂತ್(Rajnikanth) ಅವರ ಪೋಸ್ ಅನುಕರಿಸಿದ್ದಾರೆ. “ತಲೈವಾ” ಎಂದು 26 ರ ಹರೆಯದ ಕ್ರಿಕೆಟಿಗ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಪಂತ್ ನಾಯಕತ್ವದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಸಂತುಷ್ಟವಾಗಿಲ್ಲ ಎನ್ನಲಾಗಿದೆ. ಇದೆ ವೇಳೆ ಚೆನ್ನೈ ಸೂಪರ್ ಕಿಂಗ್ಸ್ (CSK) ಮಾಜಿ ನಾಯಕ ಈ ವರ್ಷ 43 ವರ್ಷಕ್ಕೆ ಕಾಲಿಡಲಿದ್ದಾರೆ. ಕಳೆದ ಋತುವಿನ ಉದ್ದಕ್ಕೂ ಮೊಣಕಾಲಿನ ಗಮನಾರ್ಹ ಸಮಸ್ಯೆಗಳೊಂದಿಗೆ ಹೋರಾಡಿದ್ದರು, ಆಗಾಗ್ಗೆ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ವಿಶೇಷವೆಂದರೆ ಧೋನಿ ಅವರ ವಿಕೆಟ್ ಕೀಪಿಂಗ್ ಮಾನದಂಡಗಳು ಎಂದಿಗೂ ಕುಸಿದಿಲ್ಲ.ತಂಡದಲ್ಲಿ ತಮ್ಮ ಜಾಗ ಯುವ ಕ್ರಿಕೆಟಿಗನಿಗೆ ಬಿಟ್ಟು ಕೊಡಲಿದ್ದಾರೆಯೇ ಎನ್ನುವ ಪ್ರಶ್ನೆಗಳು ಮೂಡಿವೆ.


Share with

Leave a Reply

Your email address will not be published. Required fields are marked *