ಬೆಂಗಳೂರು: ಡಾರ್ಲಿಂಗ್ ಪ್ರಭಾಸ್ ವೃತ್ತಿ ಬದುಕಿನ ಮತ್ತೊಂದು ದುಬಾರಿ ಸಿನಮಾವೆಂದೇ ಹೇಳಲಾಗುತ್ತಿರುವ ‘ಕಲ್ಕಿ 2898 AD’ ರಿಲೀಸ್ ಸಮೀಪಿಸುತ್ತಿದ್ದಂತೆ ಪ್ರಚಾರವೂ ಜೋರಾಗಿ ನಡೆಯುತ್ತಿದೆ. ಈಗಾಗಲೇ ತನ್ನ ಟೀಸರ್, ಟ್ರೇಲರ್ ನಿಂದ ಗಮನ ಸೆಳೆದಿರುವ ‘ ‘ಕಲ್ಕಿ 2898 AD’ ‘ಬುಜ್ಜಿ’ ವಾಹನದಿಂದಲೂ ಸಖತ್ ಸೌಂಡ್ ಮಾಡಿದೆ. ಚಿತ್ರದಲ್ಲಿ ಭೈರವ (ಪ್ರಭಾಸ್) ಅವರ ವಾಹನ ಆಗಿರುವ ಬುಜ್ಜಿಯನ್ನು ಸದ್ಯ ಚಿತ್ರದ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ.
ಬುಜ್ಜಿಯನ್ನು ಸಿನಿಮಾದ ಪ್ರಚಾರಕ್ಕಾಗಿ ನಾನಾ ಕಡೆ ಬಳಲಾಗಿದೆ. ತಮಿಳುನಾಡು, ಆಂಧ್ರದ ಕಡೆಗಳಲ್ಲಿ ಬುಜ್ಜಿ ರೌಂಡ್ಸ್ ಹಾಕಿದೆ.
ಚಿತ್ರಕ್ಕಾಗಿ ವಿಶೇಷವಾಗಿ ಡಿಸೈನ್ ಆಗಿರುವ ‘ಬುಜ್ಜಿ’ಯನ್ನು ಅಕ್ಕಿನೇನಿ ನಾಗಚೈತನ್ಯ, ಮಾಜಿ ಫಾರ್ಮುಲಾ ಒನ್ ರೇಸರ್ ನಾರಾಯಣ್ ಕಾರ್ತಿಕೇಯನ್, ಆನಂದ್ ಮಹೀಂದ್ರ ಸೇರಿದಂತೆ ಹಲವರು ಸವಾರಿ ಮಾಡಿದ್ದಾರೆ.
ಇದೀಗ ಕರ್ನಾಟಕಕ್ಕೂ ಬುಜ್ಜಿ ಬಂದಿದ್ದು, ನಟ – ನಿರ್ದೇಶಕ ರಿಷಬ್ ಶೆಟ್ಟಿ ಅವರ ಊರಾದ ಕುಂದಾಪುರಕ್ಕೆ ಬಂದಿದೆ. ಖಾಲಿ ಮೈದಾನದಲ್ಲಿ ಬುಜ್ಜಿಯನ್ನೇರಿ ರಿಷಬ್ ಅದರ ಸವಾರಿಯನ್ನು ಮಾಡಿ ಥಿಲ್ ಆಗಿದ್ದಾರೆ.
“ಚಿತ್ರದ ಟೀಸರ್ ನೋಡಿಯೇ ಗೊತ್ತಾಯಿತು. ಬುಜ್ಜಿಯ ರೇಂಜ್ ಯಾವ ಮಟ್ಟಿಗೆ ಇದೆಯೆಂದು. ಬುಜ್ಜಿ ಸವಾರಿ ಮಾಡಿದ್ದು ಒಂದು ಅದ್ಭುತ ಅನುಭವ. ಆಲ್ ದಿ ಬೆಸ್ಟ್ ಭೈರವ ಅಂಡ್ ಬುಜ್ಜಿ. ಕಲ್ಕಿ ಜೂನ್ 27ಕ್ಕೆ ರಿಲೀಸ್ ಆಗುತ್ತೆ. ಎಲ್ಲರೂ ಥಿಯೇಟಗೆರ್‌ಗೆ ಬಂದು ಸಿನಿಮಾ ನೋಡಿ” ಎಂದು ರಿಷಬ್ ಹೇಳಿದ್ದಾರೆ.
ಬುಜ್ಜಿ ಸವಾರಿ ಮಾಡುವ ವಿಡಿಯೋವನ್ನು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ.
ಇತ್ತ ರಿಷಬ್ ಸದ್ಯ ‘ಕಾಂತಾರ ಪ್ರೀಕ್ವೆಲ್ ಬ್ಯುಸಿಯಾಗಿದ್ದಾರೆ.