ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಉಪ್ಪಳ ಬಳಿಯ ಹನುಮಾನ್‌ನಗರದಲ್ಲಿ ಕಳೆದ ವರ್ಷ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ ಸಮುದ್ರ ಪಾಲಾದ ಘಟನೆ ನಡೆದಿದೆ. ಇದರಿಂದ ಈ ಪ್ರದೇಶಕ್ಕೆ ವಾಹನ ಸಂಚಾರ ಮೊಟಕುಗೊಂಡ ಹಿನ್ನೆಲೆಯಲ್ಲಿ ಇಲ್ಲಿನ ನೂರಾರು ಮೀನುಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಇದೀಗ ಸುಮಾರು ೫೦ ಮೀಟರ್ ರಸ್ತೆ ಸಮುದ್ರ ಪಾಲಾಗಿದ್ದು, ಇನ್ನು ಕಡಲ್ಕೊರೆತ ಮುಂದುವರಿದಲ್ಲಿ ಇನ್ನಷ್ಟು ಹಾನಿಗೊಂಡು ಪರಿಸರದ ಹಲವಾರು ಮನೆಗಳಿಗೆ ಅಪಾಯ ಉಂಟಾಗಲಿದೆ. ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೀಗ ಉಪ್ಪಳ ಸಹಿತ ವಿವಿಧ ಕಡೆಗಳಿಗೆ ರೈಲ್ವೇ ನಿಲ್ದಾಣದ ಮೂಲಕ ನಡೆದು ಹೋಗಬೇಕಾದ ಪರಿಸ್ಥಿತಿ ಉಂಟಾಗಿದ್ದು, ಅಸೌಖ್ಯ ಬಾಧಿತರನ್ನು ಆಸ್ಪತ್ರೆಗೆ ತಲುಪಿಸಲು ಕುಟುಂಬ ಆತಂಕಗೊAಡಿದೆಕೀಗಾಗಲೇ ಐಲ ಶಿವಾಜಿನಗರ, ಮಣಿಮುಂಡ, ಮೂಸೋಡಿ, ಶಾರದಾನಗರದಲ್ಲಿ ಕಡಲ್ಕೊರೆತ ಮುಂದು ವರಿಯುತ್ತಿದ್ದು, ಹಲವಾರು ಮನೆಗಳು ಅಪಾಯದಲ್ಲಿಂಚಿನಲ್ಲಿದೆ. ಸಂಬoಧಪಟ್ಟ ಅಧಿಕಾರಿಗಳು ಕೂಡಲೇ ಪರಿಹಾರ ಮಾಡಬೇಕೆಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.