ವಿಟ್ಲ: ದ.ಕ ಜಿಲ್ಲಾ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ ನಡೆಯಿತು.
ವಿಟ್ಲದ ಜೈನ ಬಸದಿಯಿಂದ ಹೊರಟ ರೋಡ್ ಶೋ ವಿಟ್ಲ ಮುಖ್ಯ ಪೇಟೆಯಲ್ಲಿ ಸಂಚರಿಸಿ, ಕಾಸರಗೋಡು ರಸ್ತೆ, ಮಂಗಳೂರು ರಸ್ತೆ, ಶಾಲಾ ರಸ್ತೆಗಳಲ್ಲಿ ಸಂಚರಿಸಿತು.
ಸಂಸದ ನಳಿನ್ ಕುಮಾರ್ ಕಟೀಲ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಹರಿಕೃಷ್ಣ ಬಂಟ್ವಾಳ ಅವರು ರೋಡ್ ಶೋಗೆ ನೇತೃತ್ವ ನೀಡಿದ್ದರು.
ಈ ಸಂದರ್ಭ ಬಿಜೆಪಿ ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಸುಲೋಚನಾ ಭಟ್, ಆರ್.ಸಿ ನಾರಾಯಣ, ಸಹಜ್ ರೈ, ಪುರುಷೋತ್ತಮ ಮುಗುಳಿಮನೆ, ನಿತಿಷ್ ಶಾಂತಿವನ, ಸಾಜ ರಾಧಾಕೃಷ್ಣ ಆಳ್ವ, ಅರುಣ್ ಎಂ ವಿಟ್ಲ, ಹರಿಪ್ರಸಾದ್ ಯಾದವ್, ದಯಾನಂದ ಶೆಟ್ಟಿ ಉಜಿರೆಮಾರ್, ಕರುಣಾಕರ ನಾಯ್ತೋಟ್ಟು, ಜಗನ್ನಾಥ ಸಾಲಿಯಾನ್, ರಾಜೇಶ್ ಕುಮಾರ್ ಬಾಳೆಕಲ್ಲು, ನರ್ಸಪ್ಪ ಪೂಜಾರಿ, ವೀರಪ್ಪ ಗೌಡ, ಲೋಕನಾಥ ಶೆಟ್ಟಿ ಕೊಲ್ಯ, ಹರೀಶ್ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.