ಟೀಮ್ ಇಂಡಿಯಾದಿಂದ ರೋಹಿತ್ ಶರ್ಮಾ ಕಿಕ್ ಔಟ್ ಬಹುತೇಕ ಖಚಿತ..!

Share with

ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಚುಟುಕು ಮಾದರಿ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದಾಗ್ಯೂ ಹಿಟ್ಮ್ಯಾನ್ ಏಕದಿನ ಹಾಗೂ ಟೆಸ್ಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದರು. ಇದಕ್ಕೆ ಮುಖ್ಯ ಕಾರಣ ಮುಂಬರುವ ಚಾಂಪಿಯನ್ಸ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ.

ಈ ಎರಡು ಟೂರ್ನಿಗಳ ಬಳಿಕ ರೋಹಿತ್ ಶರ್ಮಾ ಭಾರತ ತಂಡದಿಂದ ಹೊರಬೀಳುವುದು ಬಹುತೇಕ ಖಚಿತ. ಏಕೆಂದರೆ ಮುಂದಿನ ವರ್ಷ ಹಿಟ್ಮ್ಯಾನ್ 38ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಅವರನ್ನು ಎರಡು ತಂಡಗಳ ನಾಯಕತ್ವದಿಂದ ಕೆಳಗಿಳಿಸಿ ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಲು ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿ ಚರ್ಚಿಸಿದೆ.

ಒಂದು ವೇಳೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಸರಣಿ ಸೋತರೆ, ಟೆಸ್ಟ್ ತಂಡದಿಂದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸುವುದು ಖಚಿತ. ಏಕೆಂದರೆ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನು ಮುಂದಿಟ್ಟುಕೊಂಡು ಹಿಟ್ಮ್ಯಾನ್ ಅವರನ್ನು ಟೆಸ್ಟ್ನಲ್ಲಿ ನಾಯಕರಾಗಿ ಈವರೆಗೆ ಮುಂದುವರೆಸಲಾಗಿದೆ.

ಹಾಗೆಯೇ 2025ರ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ತಂಡದಿಂದಲೂ ರೋಹಿತ್ ಶರ್ಮಾ ಹೊರಬೀಳಲಿದ್ದಾರೆ. ಅಲ್ಲದೆ ಏಕದಿನ ತಂಡಕ್ಕೂ ಹೊಸ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಇದೇ ಕಾರಣದಿಂದಾಗಿ ಶುಭ್ಮನ್ ಗಿಲ್ ಅವರನ್ನು ಏಕದಿನ ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.


Share with

Leave a Reply

Your email address will not be published. Required fields are marked *