ಬೆಳ್ತಂಗಡಿ: ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿ ವ್ಯವಹರಿಸಿ ಒಟಿಪಿ ಪಡೆದುಕೊಂದು ಖಾತೆಯಿಂದ ರೂ.1,46,900 ಲಪಟಾಯಿಸಿದ ಘಟನೆಯೊಂದು ಕೊಕ್ಕಡದಲ್ಲಿ ನಡೆದಿದೆ. ಈ ಬಗ್ಗೆ ಕೊಕ್ಕಡದ ಮಹಿಳೆಯೋರ್ವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಕೊಕ್ಕಡ ನಿವಾಸಿ ಹರಿಣಿ(40ವ) ಎಂಬವರೇ ಮೋಸ ಹೋದವರು. ಹರಿಣಿ ಅವರು 1 ವಾರದ ಹಿಂದೆ ಜಮೀನು ಮಾರಾಟದ ಹಣವನ್ನು ಬ್ಯಾಂಕಿನಲ್ಲಿ ಜಮೆ ಮಾಡಿದ್ದರು. ಅ.21ರಂದು ಅವರ ಮೊಬೈಲ್ ಫೋನ್‌ಗೆ ಕರೆ ಮಾಡಿದ ವ್ಯಕ್ತಿ ಬ್ಯಾಂಕಿನವರು ವ್ಯವಹರಿಸುವ ರೀತಿಯಲ್ಲಿಯೇ ವ್ಯವಹರಿಸಿ ಒಟಿಪಿ ಕೇಳಿ ಪಡೆದುಕೊಂಡು ಮೋಸ ಮಾಡಿದ್ದಾರೆ. ಅವರ ಖಾತೆಯಿಂದ ರೂ.1,46,900 ಮಾಯವಾಗಿದೆ.
ಈ ಬಗ್ಗೆ ಹರಿಣಿಯವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 82/2023, ಕಲಂ:419, 420 ಐಪಿಸಿ ಮತ್ತು ಕಲಂ 66(ಸಿ) 66(ಡಿ) ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.