ನಿನ್ನೆ(ನ.19) ಹೈಟೆಕ್ ಸಿಟಿ ಬೆಂಗಳೂರಲ್ಲಿ ಹಾಡಹಗಲೇ ಭಾರೀ ದೊಡ್ಡ ದರೋಡೆ ನಡೆದಿದ್ದು ಗೊತ್ತೇ ಇದೆ. ATM ವಾಹನವನ್ನು ಅಡ್ಡಗಟ್ಟಿ ಸುಮಾರು ₹7.11 ಕೋಟಿ ದೋಚಿ ಖದೀಮರು ಪರಾರಿಯಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೊಸ ಅಪ್‌ಡೇಟ್ ಸಿಕ್ಕಿದೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ದರೋಡೆಕೋರರ ಕಾರು ಪತ್ತೆಯಾಗಿದೆ. ಕೃತ್ಯಕ್ಕೆ ಬಳಸಿದ್ದ ಇನ್ನೋವಾ ಕಾರನ್ನು ಬೆಂಗಳೂರು ಪೊಲೀಸರು ಆಂಧ್ರದ ಚಿತ್ತೂರು ಬಳಿ ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




