RSS ಸಂಘ ಸ್ವಾವಲಂಬಿ ಆಗಿದ್ದು, ಯಾರಿಂದಲೂ ಹಣ ಪಡೆಯಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಬೆಂಗಳೂರಿನ ಮಾತನಾಡಿ, ಸಂಘವನ್ನು ಸಮಾಜವು ಸ್ವೀಕರಿಸಿದೆ.

ಅನೇಕರು ಸಂಘವನ್ನು ನಿಂದಿಸುತ್ತಾರಾದರೂ ಅವರಿಗೂ ಸಂಘಟನೆಯ ಕಾರ್ಯದ ನಿಜವಾದ ಅರಿವಿದೆ. ಅವರ ನಿಂದನೆಯು ಕೇವಲ ಬಾಯಿಮಾತಿಗೆ ಸೀಮಿತ. ಇಡೀ ಸಮಾಜದ ಹೃದಯ ಸಂಘದ ಪರವಾಗಿದೆ. ಇಡೀ ಸಮಾಜವನ್ನು ಸಂಘಟಿಸುವ ಒಂದು ಸಹಜಭಾವನೆಯನ್ನು ಸಂಘವು ಜನ್ಮ ತಾಳಿದೆ ಎಂದು ಅವರು ಹೇಳಿದ್ದಾರೆ.




