ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ಎಲ್ಲಾ ರುಡ್ ಸೆಟ್ ಸಂಸ್ಥೆಗಳ ನಿರ್ದೇಶಕರ ಮತ್ತು ಉಪನ್ಯಾಸಕರುಗಳ ಸೆ.14 ಮತ್ತು 15ರಂದು ನಡೆಯಲಿರುವ ವಾರ್ಷಿಕ ಕಾರ್ಯಾಗಾರದ ಉದ್ಘಾಟನೆಯನ್ನು ಸೆ.14 ರಂದು ಸಂಸ್ಥೆಯ ಅಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ||ಡಿ.ವೀರೇಂದ್ರ ಹೆಗ್ಗಡೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ರುಡ್ ಸೆಟ್ ಎಕ್ಸಿಕ್ಯಿಟಿವ್ ಡೈರೆಕ್ಟರ್ ಗಿರಿಧರ್ ಕಲ್ಲಾಪುರ್, ಕೆನರಾ ಬ್ಯಾಂಕ್ ಜನರಲ್ ಮೆನೇಜರ್ ಬಿ.ಸುಧಾಕರ್ ಕೋಟರಿ, ರುಡ್ ಸೆಟ್ ನ್ಯಾಷನಲ್ ಡೈರೆಕ್ಟರ್ ಹೆಚ್.ರಘು ರಾಜ, ಜಿ.ಮುರ್ಗೆಶನ್, ದೇಶದ ವಿವಿಧ ರಾಜ್ಯಗಳ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರು, ಉಪನ್ಯಾಸಕರು ಹಾಜರಿದ್ದರು.