ಕಾಸರಗೋಡು: ಶಬರಿಮಲೆ ಯಾತ್ರೆ ಸಂದರ್ಭ ಹೃದಯ ಸ್ತಂಭನಕ್ಕೊಳಗಾದ ಚೆನ್ನೈಯ ವ್ಯಕ್ತಿಗೆ ತತ್‌ಕ್ಷಣ ಕರ್ನಾಟಕದ ಗೋಕಾಕದ ಹೊಟೇಲ್ ಉದ್ಯಮಿ ಪ್ರಭಾಕರ್ ಶೆಟ್ಟಿ ಅವರು ಸಿಪಿಆರ್ (Cardio pulmonary resuscitation) ನಡೆಸುವ ಮೂಲಕ ಜೀವ ಉಳಿಸಿದ್ದಾರೆ. ಈ ಕುರಿತಾದ ವೀಡಿಯೋವೊಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಅಯ್ಯಪ್ಪ ಸನ್ನಿಧಾನ ಯಾತ್ರೆ ಸಂದರ್ಭ ಕಾಡು ದಾರಿಯಲ್ಲಿ ಸ್ಮೃತಿ ತಪ್ಪಿದ ಅಯ್ಯಪ್ಪ ವ್ರತಧಾರಿಗೆ ಕರ್ನಾಟಕದ ಓರ್ವ ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ನೀಡುತ್ತಿರುವ ದೃಶ್ಯ ವೀಡಿಯೋದಲ್ಲಿದೆ.




