
ಕೇರಳ: ಶಬರಿಮಲೆಯಲ್ಲಿ ದರ್ಶನ ಮಾರ್ಗದಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧಾರ ಮಾಡಿದ್ದು, ಭಕ್ತರು ಪವಿತ್ರವಾದ 18 ಮೆಟ್ಟಿಲುಗಳನ್ನು ಹತ್ತಿದ ತಕ್ಷಣವೇ ದೇವರ ದರ್ಶನ ಭಾಗ್ಯ ದೊರೆಯಲಿದೆ.
18 ಪವಿತ್ರ ಮೆಟ್ಟಿಲುಗಳನ್ನು ಹತ್ತಿದ ಭಕ್ತರಿಗೆ ದೇವರ ದರ್ಶನಕ್ಕೆ ಇನ್ನೂ ದೂರ ಹೋಗಬೇಕಿತ್ತು. ಆದರೆ ಟಿಡಿಬಿ ತೆಗೆದುಕೊಂಡಿರುವ ಈ ನಿರ್ಧಾರವು ಭಕ್ತರಿಗೆ ದೇವರ ದರ್ಶನವು ನೇರವಾಗಿ ಪಡೆಯುವಂತಾಗಿದೆ. ದರ್ಶನಕ್ಕೆ ಕಾಯುವ ಸಮಯ ಕೂಡಾ ಕಡಿಮೆಯಾಗಲಿದೆ.
ಮಾ.15 ರಂದು ಆರಂಭವಾಗುವ ಮಾಸಿಕ ಪೂಜೆಯ ಸಮಯದಲ್ಲಿ ಈ ಬದಲಾವಣೆ ಕುರಿತು ಪ್ರಾಯೋಗಿಕ ಜಾರಿಗೆ ಮಾಡಲಾಗುವುದು.





