ಶಬರಿಮಲೆ ದೇಗುಲದ ಬಾಗಿಲು ಇಂದು ಓಪನ್; ಅಕ್ಟೋಬರ್ 22ರವರೆಗೆ ಭಕ್ತರ ದರ್ಶನಕ್ಕೆ ಅವಕಾಶ

Share with

ಶಬರಿಮಲೆ, ಅಕ್ಟೋಬರ್ 17: ತುಳಮಾಸ ಪೂಜೆಗಳಿಗಾಗಿ ಶಬರಿಮಲೆ (Sabarimala) ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ಇಂದು ತೆರೆದಿದೆ. ತುಳಮಾಸ ಪೂಜೆ ಆರಂಭವಾಗುತ್ತಿದ್ದಂತೆ ಭಕ್ತರು ಪ್ರಾರ್ಥನೆ ಸಲ್ಲಿಸಲು ಪಟಣಾಂತಿಟ್ಟದಲ್ಲಿರುವ ಶಬರಿಮಲೆ ದೇವಾಲಯದ ಬಾಗಿಲುಗಳನ್ನು ತೆರೆಯಲಾಗಿದೆ.

ಇಂದಿನಿಂದ ಅಕ್ಟೋಬರ್ 22ರವರೆಗೆ ಶಬರಿಮಲೆ ಬಾಗಿಲು ತೆರೆದಿರುತ್ತದೆ. ಮುಂದಿನ ವಾರ ಅಕ್ಟೋಬರ್ 22ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಶಬರಿಮಲೆಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ಧತೆಗಳು ಮತ್ತು ಭದ್ರತಾ ವ್ಯವಸ್ಥೆಗಳು ಭರದಿಂದ ಸಾಗಿವೆ.


Share with

Leave a Reply

Your email address will not be published. Required fields are marked *