
ಗೃಹ ಸಚಿವ ಪರಮೇಶ್ವರ್ ತವರಿನಲ್ಲಿ ನವಜಾತ ಶಿಶುಗಳ ಮಾರಾಟ ಜಾಲವೊಂದು ಪತ್ತೆಯಾಗಿದೆ.

ತುಮಕೂರಿನಲ್ಲಿ ನವಜಾತ ಶಿಶುವಿನ ಮಾರಾಟ ಜಾಲ ಪತ್ತೆಯಾಗಿದ್ದು, ಶಿಶುವನ್ನು ಮಾರಾಟ ಮಾಡುತ್ತಿದ್ದ ಐವರನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚಿಗೆ ಕುಣಿಗಲ್ ಆಸ್ಪತ್ರೆಯಲ್ಲಿ ಅವಿವಾಹಿತ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಮಗುವನ್ನು ಮಾರಾಟ ಮಾಡಿದ್ದಳು. ಈ ಬಳಿಕ ಯುವತಿಯ ಮನೆಯವರು ನೀಡಿದ ದೂರಿನ ಮೇಲೆ ವಿಚಾರಣೆ ನಡೆಸಿದಾಗ ಶಿಶು ಮಾರಾಟ ಜಾಲ ಪತ್ತೆಯಾಗಿದೆ.




