ಮಂಗಳೂರು: ನಿಷೇಧಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಯನ್ನು ಮಾರಾಟ ಮಾಡುತ್ತಿರುವ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ನ.6ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪ್ರಮೋದ್ ಎಂ.ಜಿ ಆಲಿಯಾಸ್ ಡಿಸ್ಕ್(30), ಮೊಹಮ್ಮದ್ ರಶೀದ್ ಎಂ.ಝಡ್ ಆಲಿಯಾಸ್ ರಾಶೀ(41) ಮತ್ತು ದರ್ಶನ್ ಎಸ್.(24) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಮಡಿಕೇರಿ ಮೂಲದವರಾಗಿದ್ದು, ನಗರದ ಫಳ್ನೀರ್‌ನ ಲಾಡ್ಜ್ ಬಳಿ ಎಂ.ಡಿ.ಎಂ.ಎ ಯನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ 75,000 ರೂಪಾಯಿ ಮೌಲ್ಯದ 15 ಗ್ರಾಮ್ ನಿಷೇಧಿತ ಎಂ.ಡಿ.ಎಂ.ಎ, ಡಿಜಿಟಲ್ ತೂಕಮಾಪನ, ಮೊಬೈಲ್ ಪೋನ್‌ಗಳು ಸಹಿತ 95,000 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.