ಸಿನಿಮಾದಿಂದ ದೂರ ಉಳಿದಿರುವ ಸಮಂತಾ ಭರ್ಜರಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ. ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ಸಮಂತಾ ರಿ ಎಂಟ್ರಿಕೊಡುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಜೊತೆ ಸಮಂತಾ ಐಟಂ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಎನ್.ಟಿ.ಆರ್, ದೇವರ 2, ಕೊರಟಾಲ ಶಿವ
ಯಂಗ್ ಟೈಗರ್ ಎನ್.ಟಿ.ಆರ್ ದೇವರ ಸಿನಿಮಾ ಮೂಲಕ ಮತ್ತೊಂದು ಸೂಪರ್ ಹಿಟ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಕಲೆಕ್ಷನ್‌ನೊಂದಿಗೆ ಈ ಸಿನಿಮಾ ಈಗಲೂ ಗಳಿಕೆ ಮಾಡುತ್ತಿದೆ. ಇದೀಗ ಎನ್‌ಟಿಆರ್ ಮುಂದಿನ ಸಿನಿಮಾ ಕುರಿತ ಕುತೂಹಲ ಹೆಚ್ಚಾಗುತ್ತಿದೆ. ಮುಂದಿನ ಪ್ರಾಜೆಕ್ಟ್‌ಗಳಲ್ಲಿ ಎನ್‌ಟಿಆರ್ ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ಜೊತೆ ವಾರ್ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕಿದೆ. ತ್ರಿವಿಕ್ರಮ್ ಜೊತೆಗೂ ಸಿನಿಮಾ ಮಾಡ್ತಾರಂತೆ. ಈ ನಡುವೆ ಎನ್.ಟಿ.ಆರ್ ಸಿನಿಮಾ ಬಗ್ಗೆ ಒಂದು ಅಪ್‌ಡೇಟ್ ವೈರಲ್ ಆಗ್ತಿದೆ.
ಎನ್.ಟಿ.ಆರ್ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಒಂದು ದಶಕಕ್ಕೂ ಹೆಚ್ಚು ಕಾಲ ಟಾಲಿವುಡ್‌ನಲ್ಲಿ ಸ್ಟಾರ್ ನಟಿಯಾಗಿದ್ದರು. ಸ್ಟಾರ್ ಹೀರೋಗಳಿಂದ ಹಿಡಿದು ಎಲ್ಲರೂ ಸಮಂತಾ ಜೊತೆ ಒಂದು ಸಿನಿಮಾ ಮಾಡಿದ್ರೆ ಸಾಕು ಅನ್ನೋಷ್ಟು ಕ್ರೇಜ್ ಹುಟ್ಟುಹಾಕಿದ್ದರು. ಆದರೆ ಆರೋಗ್ಯ ಸೇರಿದಂತೆ ಹಲವು ಕಾರಣಗಳಿಂದ ಸಮಂತಾ ನಟನೆಯಿಂದ ದೂರ ಉಳಿದಿದ್ದಾರೆ.
ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ಸಮಂತಾಗೆ ಅವಕಾಶಗಳು ಸಿಕ್ಕವು. ಚಿಕ್ಕ ಹೀರೋಗಳ ಜೊತೆ ನಟಿಸಿದ್ರೂ ಇಮೇಜ್ ಕಡಿಮೆಯಾಗಲಿಲ್ಲ. ಮದುವೆ ನಂತರ ಸಿನಿಮಾಗಳಿಗೆ ಬ್ರೇಕ್ ಹಾಕಿದರು. ನಾಗಚೈತನ್ಯ ಜೊತೆ ಪ್ರೀತಿ, ಮದುವೆ ನಂತರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದ್ರು.
ನಾಗಚೈತನ್ಯಗೆ ವಿಚ್ಛೇದನ ನೀಡಿದ ನಂತರ ಸಮಂತಾ ಸುದ್ದಿಯಲ್ಲಿದ್ದರು. ಯಶೋದ, ಶಾಕುಂತಲಂ ಜೊತೆಗೆ ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾದಲ್ಲಿ ನಟಿಸಿದರು. ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ವಿಶ್ರಾಂತಿಯಲ್ಲಿದ್ದರು. ಸಿನಿಮಾಗಳಿಗೆ ಬ್ರೇಕ್ ಹಾಕಿ ಮಯೋಸೈಟಿಸ್ ಚಿಕಿತ್ಸೆ ಪಡೆದರು. ಈಗ ಮತ್ತೆ ಸಿನಿಮಾಗಳಲ್ಲಿ ಆ್ಯಕ್ಟಿವ್ ಆಗ್ತಿದ್ದಾರೆ. ಎನ್.ಟಿ.ಆರ್ ಜೊತೆ ನಟಿಸುತ್ತಿದ್ದಾರೆ ಅನ್ನೋ ಸುದ್ದಿ ಕೇಳಿಬರುತ್ತಿದೆ. ಇವರ ರಾಮಯ್ಯ ವಸ್ತಾವಯ್ಯ ಸಿನಿಮಾ ಫ್ಲಾಪ್ ಆಗಿತ್ತು. ಈಗ ಮತ್ತೆ ಈ ಜೋಡಿ ಒಂದಾಗ್ತಿದೆ.
ಎನ್.ಟಿ.ಆರ್‌ಗೆ ಜೋಡಿಯಾಗಿ ಅಲ್ಲ, ಐಟಂ ಸಾಂಗ್‌ನಲ್ಲಿ ಸಮಂತಾ ನಟಿಸುತ್ತಿದ್ದಾರೆ ಎಂದು ಕೆಲ ಮೂಲಗಳು ಹೇಳುತ್ತಿದೆ. ಎನ್.ಟಿ.ಆರ್ – ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಸಿನಿಮಾದಲ್ಲಿ ಸಮಂತಾ ಐಟಂ ಸಾಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. 2026 ರಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಪುಷ್ಪ ಸಿನಿಮಾದಲ್ಲೂ ಸಮಂತಾ ಐಟಂ ಸಾಂಗ್ ಮಾಡಿದ್ದರು. ಮತ್ತೊಮ್ಮೆ ಎನ್.ಟಿ.ಆರ್, ಸಮಂತಾ ಜೋಡಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಲಿದೆ.