ಅಸೌಖ್ಯ ಬಾಧಿಸಿ ಸಂಘ ಪರಿವಾರದ ಕಾರ್ಯಕರ್ತ ಸಂತೋಷ್ ಕುಮಾರ್ ನಿಧನ

Share with


ಉಪ್ಪಳ : ನೀರ್ಚಾಲ್  ಬಳಿಯ ಮುಂಡಿತ್ತಡ್ಕ  ನಿವಾಸಿ (ದಿ ) ಬಾಲಚಂದ್ರ  ಹಾಗೂ (ದಿ ) ಶ್ರೀಮತಿ ದಂಪತಿಯರ  ಏಕೈಕ  ಪುತ್ರ  ಸಂತೋಷ್ ಕುಮಾರ್ (30) ಅಸೌಖ್ಯ ಬಾಧಿಸಿ ನಿಧಾನರಾದರು.  ಇವರು  ಹಲವು  ವರ್ಷಗಳಿಂದ  ಉಪ್ಪಳ ಬಳಿಯ  ಪಂಚ್ಲಂಪಾರೆ  ಕಾಲನಿಯಲ್ಲಿ ರುವ  ಮಾವ ಚಂದ್ರಹಾಸ ರವರ ಮನೆಯಲ್ಲಿ  ವಾಸವಾಗಿದ್ದರು. ಅಸೌಖ್ಯ ಬಾಧಿಸಿ ಒಂದು ವಾರದಿಂದ  ಪೆರಿಯಾರಂ  ಮೆಡಿಕಲ್  ಕಾಲೇಜು  ಆಸ್ಪತ್ರೆಯ ಲ್ಲಿ  ನಿಗಾ ವಿಭಾಗ ಘಟಕದಲ್ಲಿ ಚಿಕಿತ್ಸೆ ಯಲ್ಲಿದ್ದರು.  ಆದರೆ ಚಿಕಿತ್ಸೆ ಫಲಕಾರಿ ಯಾಗದೆ  ಶನಿವಾರ  ಮುಂಜಾನೆ  ನಿಧಾನರಾದರು. ಇವರು  ಕಾಸರಗೋಡಿನಲ್ಲಿ  ಸಿಸಿ  ಕ್ಯಾಮರಾ  ಫಿಟಿಂಗ್ ಕೆಲಸವನ್ನು  ನಿರ್ವಹಿಸುತ್ತಿರುವ  ಇವರು ಸಂಘ ಪರಿವಾರದ  ಕಾರ್ಯಕರ್ತರಾಗಿದ್ದಾರೆ.   ಶ್ರೀದೇವಿ  ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ಪಂಚ್ಲಂಪಾರೆ ಇದರ ಸದಸ್ಯರಾಗಿದ್ದಾರೆ.  ಸಂತೋಷ ಕುಮಾರ್  ಅಸೌಖ್ಯ ಬಾಧಿಸಿ  ಚಿಕಿತ್ಸೆಯಲ್ಲಿ ದ್ದ ವೇಳೆ ಅವರಿಗೆ ಬಿಜೆಪಿ ಮುಖಂಡ  ಕೆ. ಪಿ ವಲ್ಸರಾಜ್  ಪ್ರತಾಪನಗರ ರವರ ನೇತೃತ್ವದಲ್ಲಿ ಆರ್ಥಿಕ  ಸಹಾಯ ವೊದಗಿಸಲಾಗಿತ್ತು.


Share with

Leave a Reply

Your email address will not be published. Required fields are marked *