ಸ್ಕೂಟರ್‌ಗೆ ಕಾರು ಡಿಕ್ಕಿ ಹೊಡೆದು ಸಂಘ ಪರಿವಾರದ ಮುಖಂಡ  ಧನ್‌ರಾಜ್ ಪ್ರತಾಪನಗರ ಮೃತ್ಯು

Share with


ಉಪ್ಪಳ:  ಸ್ಕೂಟರ್‌ಗೆ ಕಾರು ಡಿಕ್ಕಿಹೊಡೆದು ಸಂಘ ಪರಿವಾರದ ಮುಖಂಡ ದಾರುಣವಾಗಿ ಸಾವನ್ನಪಿದ ಘಟನೆ ನಡೆದಿದೆ. ಪ್ರತಾಪನಗರ ಬೀಟಿಗದ್ದೆ ನಿವಾಸಿ [ದಿ] ಲೋಕಯ್ಯ ಪೂಜಾರಿ ರವರ ಪುತ್ರ ಬಿಜೆಪಿ ಕುಂಬಳೆ ಮಂಡಲ ಕಾರ್ಯದರ್ಶಿ ಧನ್‌ರಾಜ್ ಪೂಜಾರಿ [44]   ಮೃತಪಟ್ಟಿದ್ದಾರೆ.  ಶನಿವಾರ ಮಧ್ಯಾಹ್ನ ಕುಂಬಳೆಯಿoದ  ಸ್ಕೂಟರ್‌ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಶಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಎದುರಿನಿಂದ  ಅಮಿತ ವೇಗದಲ್ಲಿ ಬಂದ ಕಾರು ಸ್ಕೂಟರ್‌ಗೆ ಡಿಕ್ಕಿ ಹೊಡೆದ   ಇದರಿಂದ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ಇವರನ್ನು ಕೂಡಲೇ ಸ್ಥಳೀಯರು ಬಂದ್ಯೋಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.  ಇವರು ಈ ಹಿಂದೆ ಹಲವು ವರ್ಷಗಳ ಕಾಲ  ಕೇರಳ ಸಾರಿಗೆ ನಿಗಮದಲ್ಲಿ ಅರೆಕಾಲಿಕ ನಿರ್ವಾಹಕರಾಗಿದ್ದರು.  ಬಳಿಕ ಊರಿನಲ್ಲಿ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಬಿಜೆಪಿ ಸಹಿತ ಸಂಘ ಪರಿವಾರ ಸಂಘಟನೆಯಲ್ಲಿ ಸಕ್ರೀಯರಾಗಿದ್ದರು.   ಪ್ರತಾಪನಗರ  ಜೈ ಹನುಮಾನ್ ಪ್ರೆಂಡ್ಸ್ ಕ್ಲಬ್‌ನ ಗೌರವಾಧ್ಯಕ್ಷ , ಪ್ರತಾಪನಗರ ಶ್ರೀ ಗೌರೀ ಗಣೇಶ ಮಂದಿರ,  ಹಾಗೂ ಊರಿನ ಸಂಘ ಸಂಸ್ಥೆಗಳಲ್ಲಿ  ಸಕ್ರೀಯರಾಗಿದ್ದರು. ಮೃತರು ತಾಯಿ ರೇವತಿ, ಸಹೋದರರಾದ ಕಿಶೋರ್,  ಜಗದೀಶ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ   [ಶನಿವಾರ] ರಾತ್ರಿ ಮನೆ ಪರಿಸರದಲ್ಲಿ ಅಂತ್ಯಸoಸ್ಕಾರ ನಡಯಿತು.


Share with

Leave a Reply

Your email address will not be published. Required fields are marked *