ಕಾಸರಗೋಡು: ಕೂಡ್ಲು ರಾಮದಾಸ ನಗರದಲ್ಲಿ ಅತಿ ಪ್ರಸಿದ್ಧ ಹಾಗೂ ಪುರಾತನ ದೇವಾಲಯವಾಗಿರುವ ದೇವರ ಗುಡ್ಡೆ ಶ್ರೀ ಶೈಲ ಮಹಾದೇವ ದೇವಾಲಯ ಲೋಕ ಕಲ್ಯಾಣಾರ್ಥವಾಗಿ ಜರಗುವ, ಧನು ಪೂಜೆಯ ಪ್ರಯುಕ್ತ ಜ.7ರಂದು ಆದಿತ್ಯವಾರದಂದು ಸಾಮೂಹಿಕ ಶ್ರೀ ಸರ್ವೈಶ್ವರ್ಯ ಪೂಜೆ ಶ್ರೀ ಕ್ಷೇತ್ರದ ತಂತ್ರಿ ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಅಸ್ರರ ಅನುಗ್ರಹದೊಂದಿಗೆ, ಗಣೇಶ್ ಭಟ್ ಅವರ ನೇತೃತ್ವದಲ್ಲಿ ರಾಮ್ ಭಟ್ ಹಾಗೂ ವೆಂಕಟರಮಣ ಹೊಳ್ಳ ಇವರ ಉಪಸ್ಥಿತಿಯಲ್ಲಿ ಬಹು ವಿಜೃಂಭಣೆಯಿಂದ ಜರಗಿತು.


ಧನು ಪೂಜೆ ಸಮಿತಿ ಅಧ್ಯಕ್ಷ ದಿನೇಶ್ ಎಂ ಟಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಗಟ್ಟಿ, ಕಾರ್ಯದರ್ಶಿ ಉದಯಕುಮಾರ್ ಮನ್ನಿಪಾಡಿ, ಶ್ರೀಶೈಲ ಮಹಾದೇವ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಸುಭಾಷ್ ಪಾಟಳಿ, ಪ್ರಧಾನ ಕಾರ್ಯದರ್ಶಿ ದಾಮೋದರ್ ನಾಯಕ್ ಗಂಗೆ, ಕೋಶಾಧಿಕಾರಿ ಪ್ರವೀಣ್ ನಾಯಕ್ ಕಾಳ್ಯಂಗಾಡು, ಹಿರಿಯರಾದ ಮಹಾಬಲ ರೈ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಸಾವಿರಾರು ಮಹಿಳೆಯರು ಸರ್ವೈಶ್ವರ್ಯ ಪೂಜೆಯಲ್ಲಿ, ಭಾಗವಹಿಸಿ ಶ್ರೀ ಮಹಾದೇವನ ಕೃಪೆಗೆ ಪಾತ್ರರಾದರು.