ಕೆ.ಎಸ್.ಎಸ್.ಪಿ.ಯು ಮಂಜೇಶ್ವರ ಬ್ಲೋಕ್ ಕಮಿಟಿಯಿಂದ ಸತ್ಯಾಗ್ರಹ

Share with

ಉಪ್ಪಳ: ಕೇರಳ ಸ್ಟೇಟ್ ರ‍್ವೀಸ್ ಪೆನ್ಶರ‍್ಸ್ ಯೂನಿಯನ್ ಸ್ಟೇಟ್ ಕಮಿಟಿಯ ಆಶ್ರಯದಲ್ಲಿ ಪೆನ್ಶನ್ ಪರಿಷ್ಕರಣೆ ಮತ್ತು ಕ್ಷಾಮ ಭತ್ತೆಯ ಎರಿಯರ್ ಕೂಡಲೇ ಏಕಕಂತಿನಲ್ಲಿ ನೀಡಬೇಕು. ಬಾಕಿಯಿರುವ ಕ್ಷಾಮ ಭತ್ತೆ ಕೂಡಲೇ ನೀಡಬೇಕು. ಉತ್ಸವ ಭತ್ತೆ ಹೆಚ್ಚಿಸಬೇಕು. ಮೆಡಿಕಲ್ ಅಲವನ್ಸ್ ಹೆಚ್ಚಿಸಬೇಕು.

ಪೆನ್ಶನ್ ಪರಿಷ್ಕರಣೆಯನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ಪಿ.ಎಫ್. ಆರ್. ಡಿ.ಎ.ರದ್ದು ಮಾಡಬೇಕು. ಮೆಡಿಸೆಪ್ ನ್ಯೂನತೆಗಳನ್ನು ಪರಿಹರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಕ್ರಟೇರಿಯಟ್ ಮುಂದೆ ನಡೆಸುವ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಕೆ ಎಸ್ ಎಸ್ ಪಿ ಯು ಮಂಜೇಶ್ವರ ಬ್ಲೋಕ್ ಕಮಿಟಿಯ ಆಶ್ರಯದಲ್ಲಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಪರಿಸರದಿಂದ ಬೃಹತ್ ಮೆರವಣಿಗೆ ಹೊರಟು ಮಂಜೇಶ್ವರ ಬ್ಲೋಕ್ ಪಂಚಾಯತ್ ಆಫೀಸ್ ಸಮೀಪ ಮಧ್ಯಾಹ್ನ ಒಂದು ಗಂಟೆ ತನಕ ಸತ್ಯಾಗ್ರಹ ಮಾಡಲಾಯಿತು.

ಸತ್ಯಾಗ್ರಹವನ್ನು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಮೀನ ಟೀಚರ್ ಉಧ್ಘಾಟಿಸಿದರು. ಬ್ಲೋಕ್ ಕರ‍್ಯರ‍್ಶಿ ಶ್ರೀ ಶೀನಪ್ಪ ಪೂಜಾರಿ ಅಲಾರ್ ದರ‍್ಗಿಪಳ್ಳ ಜಿಲ್ಲಾ ಉಪಾಧ್ಯಕ್ಷರಾದ ರವಿಚಂದ್ರ ಉದ್ಯಾವರ,ಭಾಸ್ಕರ ರಾವ್ ಕೆಡೆಂಜಿ , ಯಂ ಈಶ್ವರ ,ಪುಂಡಲೀಕ ನಾಯಕ್,ರವೀಂದ್ರನಾಥ್ ನಾಯಕ್ ಮೊದಲಾದವರು ನೇತೃತ್ವ ವಹಿಸಿದ್ದರು.


Share with

Leave a Reply

Your email address will not be published. Required fields are marked *