ಉಪ್ಪಳ: ಕೇರಳ ಸ್ಟೇಟ್ ಪೆನ್ಯನರ್ಸ್ ಯೂನಿಯನ್ [ಕೆ.ಎಸ್.ಎಸ್.ಪಿ.ಯು] ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸಮಿತಿ ಸದಸ್ಯರು ನಾಳೆ(ನ.8) ಬೆಳಿಗ್ಗೆ 11ರಿಂದ ಸಂಜೆ 5ರ ತನಕ ಸೆಕ್ರೆಟೇರಿಯೇಟ್ ಮುಂದೆ ನಡೆಸುವ ಸತ್ಯಾಗ್ರಹದ ಅಂಗವಾಗಿ ಎಲ್ಲಾ ಬ್ಲಾಕ್ ಕೇಂದ್ರಗಳಲ್ಲಿಯೂ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆ ತನಕ ಕೆ.ಎಸ್.ಎಸ್.ಪಿ.ಯು ಸದಸ್ಯರಿಂದ ಸತ್ಯಾಗ್ರಹ ನಡೆಯಲಿದೆ.

ಮಂಜೇಶ್ವರ ಬ್ಲಾಕ್ ಕಮಿಟಿಯ ಆಶ್ರಯದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಕಚೇರಿ ಸಮೀಪದಲ್ಲಿ ಸತ್ಯಾಗ್ರಹ ನಡೆಯಲಿದ್ದು, ಎಲ್ಲಾ ಪಿಂಚಿಣಿದಾರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬ್ಲೋಕ್ ಕಮಿಟಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




