ಕುಂಬಳೆ: ಸ್ಕೂಟರ್ ಚಲಾಯಿಸುತ್ತಿದ್ದಾಗ ಹೃದಯಾಘಾತ ಸಂಭವಿಸಿ ಬಂಬ್ರಾಣ ಚೂರಿತ್ತಡ್ಕದ ಅಶ್ರಫ್ ಯಾನೆ ಎಳಾಪ ಅಶ್ರಫ್(58) ಸಾವಿಗೀಡಾದರು. ತಲಪ್ಪಾಡಿ ಟೋಲ್ ಗೇಟ್ ದಾಟಿದ ಕೂಡಲೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ.

ಅಶ್ರಫ್ ಸ್ಕೂಟರ್ನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು. ಹೃದಯಾಘಾತದಿಂದ ಸ್ಕೂಟರ್ ರಸ್ತೆ ಬದಿ ಬಿದ್ದಿದ್ದು ಅಶ್ರಫ್ ಫುಟ್ ಪಾತ್ನಲ್ಲಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.
ಮಂಗಳೂರು ನಿವಾಸಿಯಾದ ಅಶ್ರಫ್ 31 ವರ್ಷಗಳ ಹಿಂದೆ ಚೂರಿತ್ತಡ್ಕಕ್ಕೆ ಬಂದು ವಾಸ್ತವ್ಯ ಹೂಡಿದ್ದರು.




