ಸ್ಕೂಟಿ, ಆಟೋರಿಕ್ಷಾ ಮುಖಾಮುಖಿ ಡಿಕ್ಕಿ: ಆಟೋ ಪ್ರಯಾಣಿಕ ಸಾವು!

Share with

ವಿಟ್ಲ: ಪೆರುವಾಯಿ-ಬೆರಿಪದವು ರಸ್ತೆಯಲ್ಲಿ ಸ್ಕೂಟಿ ಹಾಗೂ ಆಟೋ ರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಪ್ರಯಾಣಿಕ ಮೃತಪಟ್ಟ ಘಟನೆ ನಡೆದಿದೆ.

ಆಟೋ ಪ್ರಯಾಣಿಕ ಪೆರುವೋಡಿ ನಿವಾಸಿ ನಾಗೇಶ್ ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದು, ಪೆರುವಾಯಿ-ಬೆರಿಪದವು ರಸ್ತೆಯಲ್ಲಿ ವಾಹನವೊಂದನ್ನು ಓವರ್ ಟೇಕ್ ಮಾಡಲು ಹೋಗಿ ಸ್ಕೂಟಿ ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡಿದ್ದ ಆಟೋ ಪ್ರಯಾಣಿಕ ನಾಗೇಶ್ ರವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.


Share with

Leave a Reply

Your email address will not be published. Required fields are marked *