ಶಿವಾಜಿನಗರ, ಹನುಮಾನ್‌ನಗರದಲ್ಲಿ ಮತ್ತೆ ಕಡಲ್ಕೊರೆತ:  ಶೆಡ್ಡ್ ಸಮುದ್ರ ಪಾಲು ಹಲವು ಮನೆಗಳು ಅಪಾಯದಂಚಿನಲ್ಲಿ

Share with


ಉಪ್ಪಳ: ಕಡಲ್ಕೊರೆತ ಮತ್ತೆ ವ್ಯಾಪಕಗೊಂಡಿರುವoತೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿವಾಜಿನಗರ, ಬಂಗ್ಲ, ಹನುಮಾನ್‌ನಗರದಲ್ಲಿ ಹಲವು ಮೀನುಗಾರರ ಮನೆಗಳು ಅಪಾಯದಂಚಿನಲ್ಲಿದೆ. ಕಳೆದ ಎರಡು ದಿನಗಳಿಂದ ಕಡಲ್ಕೊರೆತ ಮತ್ತೆ ಆರಂಭಗೊoಡಿದೆ. ಇದರಿಂದ ಶಿವಾಜಿನಗರದ   ಬಂಗ್ಲ ಎಂಬಲ್ಲಿ ಮೀನುಗಾರ ಬಲೆ ಸಂಗ್ರಹದ ಶೆಡ್ಡ್ ಸಮುದ್ರ ಪಾಲಾಗಿದ್ದು, ಈ ಪರಿಸರದಲ್ಲಿ ಆರು ಮಂದಿ ಮೀನುಗಾರರ ಮನೆಗಳು ಅಪಾಯದಂಚಿಲ್ಲಿದೆ. ತೆಂಗಿನ ಮರಗಳು ಸಮುದ್ರಪಾಲಾಗಿದೆ. ಹನುಮಾನ್ ನಗರದಲ್ಲಿ ರಸ್ತೆ ಸಮುದ್ರ ಪಾಲಾಗಿರುವುದರಿಂದ ಇಲ್ಲಿನ ಮೀನುಗಾರರ ಸಂಚಾರಕ್ಕೆ ಅಡಚಣೆ ಉಂಟಾಗಿದೆ.  ಮಣಿಮುಂಡ, ಮೂಸೋಡಿ ಪರಿಸರದಲ್ಲೂ ಕಡಲ್ಕೊರೆತ ವ್ಯಾಪಕಗೊಂಡಿದೆ.  ಶಿವಾಜಿನಗರ ಬಂಗ್ಲ, ಹನುಮಾನ್ ನಗರ ಸಹಿತ ಪರಿಸರ ಪ್ರದೇಶಕ್ಕೆ  ನಿನ್ನೆ ಮಂಜೇಶ್ವರ ತಶೀಲ್ದಾರ್ ಸಹಿತ ಅಧಿಕಾರಿಗಳು, ಬಿಜೆಪಿ  ನೇತಾರರು  ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *