ವಿಟ್ಲ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಕುಂಡಡ್ಕ ಬೇರಿಕೆ ಇದರ ನೂತನ ಮಹಿಳಾ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷೆಯಾಗಿ ರೇಖಾ ಕೃಷ್ಣಪ್ಪ ಪೂಜಾರಿ ಬೇರಿಕೆ, ಉಪಾಧ್ಯಕ್ಷೆಯಾಗಿ ಯೋಗಿತಾ ಕೆಮನಾಜೆ, ಕಾರ್ಯದರ್ಶಿ ಯಾಗಿ ಪುಷ್ಪ ಬದಿಗುಡ್ಡೆ, ಕೋಶಾಧಿಕಾರಿಯಾಗಿ ಯಶೋಧ ಕೆಮನಾಜೆ, ಜತೆ ಕಾರ್ಯದರ್ಶಿಯಾಗಿ ನಳಿನಿ ಹಲಸಿನ ಕಟ್ಟೆ, ಸಂಘಟನಾ ಕಾರ್ಯದರ್ಶಿ ಯಾಗಿ ಚೇತನಾ ಮರುವಾಳ, ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷೆಯಾಗಿ ಸುಮಾ ದೇಜಪ್ಪ ಪೂಜಾರಿ ನಿಡ್ಯ ನೇಮಕಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸುನೀತಾ ಪಾದೆ, ಹರಿಣಾಕ್ಷಿ ಮೈರುಂಡ, ಸುಶೀಲಾ ಮರುವಾಳ, ಹರಿಣಾಕ್ಷಿ ಮರುವಾಳ, ಹರಿಣಾಕ್ಷಿ ನೀರಕೋಡಿ ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿಗೆ ಗೌರವ ಸಲಹೆಗಾರರಾಗಿ ಬಬಿತಾ ನೀರಕೋಡಿ, ಸುಮಾ ಅಳಕೆಮಜಲು, ವೇದಾವತಿ ಜೇಡರಕೋಡಿ, ಮೋಹಿನಿ ಕಟ್ನಾಜೆ, ವಿನಯಾ ಗುರ್ಜಿನಡ್ಕ, ಬೇಬಿ ಜೇಡರಕೋಡಿ ಅವರನ್ನು ನೇಮಕ ಮಾಡಲಾಯಿತು.