ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ನಿಧನ! ಆಗಿದ್ದೇನು?

Share with

ವಿದೇಶಕ್ಕೆ ಕಾಲ್ಕಿತ್ತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಅವರು ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹಬ್ಬುತ್ತಿದೆ. ಹಾಗಿದ್ದರೆ ನಿತ್ಯಾನಂದನಿಗೆ ಆಗಿದ್ದೇನು? ಈ

 ಅಂದಹಾಗೆ ನಿತ್ಯಾನಂದನ ಸಹೋದರಿಯ ಮಗ ಸುಂದರೇಶ್ವರನ್ ಈ ಮಾಹಿತಿಯನ್ನು ವಿಡಿಯೋ ಮೂಲಕ ಬಹಿರಂಗಪಡಿಸಿದ್ದರು. ವಿಡಿಯೋ ದಲ್ಲಿ ಅವರು ಅವರು ತಮ್ಮ ಜೀವನದುದ್ದಕ್ಕೂ ಹಿಂದೂ ಧರ್ಮಕ್ಕಾಗಿ ಶ್ರಮಿಸಿದರು ಎಂದು ಸ್ಮರಿಸಿದರು. ನಿತ್ಯಾನಂದರು ತಮ್ಮ ಆಧ್ಯಾತ್ಮಿಕ ಸಂದೇಶಗಳಿಂದ ಅನೇಕ ಭಕ್ತರ ಮೆಚ್ಚುಗೆಯನ್ನು ಗಳಿಸಿದರು, ಇಂದು ನಮ್ಮನ್ನು ಅಗಲಿದ್ದಾರೆ ಎಂದು ಹೇಳಿದ್ದರು.

ಅಷ್ಟೇ ಅಲ್ಲದೆ ನಿತ್ಯಾನಂದ ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕೋಮಾದಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಅವರು ಈ ವದಂತಿಗಳಿಗೆ ಅಂತ್ಯ ಹಾಡಲು ವೀಡಿಯೊ ಮೂಲಕ ಉಪನ್ಯಾಸಗಳನ್ನು ನೀಡಲು ಪ್ರಾರಂಭಿಸಿದರು. ಆದರೆ, ಈಗ ಅವರು ಮತ್ತೆ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.


Share with

Leave a Reply

Your email address will not be published. Required fields are marked *