ಸೆಲ್ಫಿ ಕ್ರೇಜ್: ಕೂದಲೆಳೆ ಅಂತರದಲ್ಲಿ ಭಾರೀ ಅಪಘಾತದಿಂದ ಪಾರಾದ ಮಹಿಳೆ

Share with

ಸೆಲ್ಫಿ, ರೀಲ್ಸ್ ಕ್ರೇಜ್ ಜನರಲ್ಲಿ ಹೆಚ್ಚಾಗಿದ್ದು, ಅದಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ, ಈ ಪ್ರವೃತ್ತಿಯು ಅನೇಕ ಜನರ ಪ್ರಾಣವನ್ನು ತೆಗೆದುಕೊಂಡಿದೆ. ಇದಕ್ಕೆ ಹಲವಾರು ಉದಾಹರಣೆಗಳನ್ನು ನಾವು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುತ್ತೇವೆ. ಇದೀಗ ತೈವಾನ್‌ನಲ್ಲೇ ಅಂತದ್ದೇ ಪ್ರಕರಣ ದಾಖಲಾಗಿದೆ. ಚಲಿಸುವ ರೈಲಿನ ಮುಂದೆ ನಿಂತು ಮಹಿಳೆಯೊಬ್ಬಳು ಸೆಲ್ಫಿ ತೆಗೆಯಲು ಹೋಗಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅಪಘಾತದಿಂದ ಪಾರಾಗಿದ್ದಾಳೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಡಿಸೆಂಬರ್ 14 ರಂದು ಲುಯಿ ಎಂಬ ಮಹಿಳೆ ರಜೆಗಾಗಿ ತೈವಾನ್‌ನ ಚಿಯಾಯ್‌ನಲ್ಲಿರುವ ಅಲಿಶಾನ್ ಫಾರೆಸ್ಟ್ ರೈಲ್ವೆ ಬಳಿ ಹೋಗಿದ್ದಾಳೆ. ದೂರದಿಂದ ರೈಲು ಬರುತ್ತಿರುವುದನ್ನು ಕಂಡು ತಕ್ಷಣ ಮಹಿಳೆ ಸೆಲ್ಫಿ ತೆಗೆದುಕೊಳ್ಳಲು ರೈಲಿನ ಹಳಿಯ ಪಕ್ಕದಲ್ಲಿ ನಿಂತಿದ್ದಾಳೆ. ಆದರೆ ಬಂದ ರಭಸಕ್ಕೆ ಆಕೆಗೆ ಡಿಕ್ಕಿ ಹೊಡೆದಿದೆ. ಸದ್ಯ ಸಣ್ಣಪುಟ್ಟ ಗಾಯಗಳಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಡಿಕ್ಕಿಯ ರಭಸಕ್ಕೆ ಲೂಯಿಸ್ ಅವರ ಎಡಗಾಲಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ

ಘಟನೆಗೆ ಸಂಬಂಧಿಸಿದ ಭೀಕರ ದೃಶ್ಯವನ್ನು @Bubblebathgirl ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಡಿಸೆಂಬರ್ 16ರಂದು ಹಂಚಿಕೊಂಡಿರುವ ವಿಡಿಯೋ ಸದ್ಯ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ. ಘಟನೆಯಿಂದಾಗಿ ರೈಲು ಸಂಚಾರದಲ್ಲಿ 60 ನಿಮಿಷಗಳ ವಿಳಂಬವಾಗಿದ್ದು, ಸಾವಿರಾರೂ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ.


Share with

Leave a Reply

Your email address will not be published. Required fields are marked *