ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ, ಸಿ. ಪಿ.ಐ. ಪಕ್ಷದ ಹಿರಿಯ ನೇತಾರ, ಪ್ರಗತಿಪರ ಕೃಷಿಕರಾದ ಉದ್ಯಾವರ ಮಾಡ ಪಟ್ನ ನಿವಾಸಿ ಹಿರಿಯ ಕೃಷಿಕ ರಾಘವ ಪಟ್ನ (೮೬) ಪ್ರಾಯಪ್ರಬುದ್ದರಾಗಿ ಶನಿವಾರ ಬೆಳಗ್ಗೆ ಸ್ವ – ಗೃಹದಲ್ಲಿ ನಿಧನರಾದರು. ಮೃತರು ಪತ್ನಿ: ಬೇಬಿ, ಮಕ್ಕಳಾದ: ಕರುಣಾಕರ, ಶಶಿಧರ, ದಿನೇಶ್, ಶ್ರೀಧರ (ಸಿ.ಪಿ. ಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಜಯಶ್ರೀ, ರೇಷ್ಮಾ, ದಯಾಕರ ಮಾಡ ( ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಟ್ರಸ್ಟಿ ಸದಸ್ಯರು ಹಾಗೂ ಎ. ಐ.ವೈ.ಎಫ್ ಮಂಜೇಶ್ವರ ಮಂಡಲ ಕಾರ್ಯದರ್ಶಿ ಅಳಿಯಂದಿರಾದ: ಅಜಿತ್ ಕಾಸರಗೋಡು, ಸುರೇಶ್ ಚೌಕಿ, ಸೊಸೆಯಂದಿರಾದ: ಚಿತ್ರ, ಚಂದ್ರಾವತಿ, ಸವಿತಾ, ಪವಿತ್ರ, ಸುಪ್ರೀತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಉದ್ಯಾವರ ಮಾಡ ಹಿಂದೂ ರುದ್ರ ಭೂಮಿಯಲ್ಲಿ ನಡೆಯಿತು. ಮೃತರ ನಿಧನಕ್ಕೆ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಆಡಳಿತ ಸಮಿತಿ, ಕಟ್ಟೆ ಫ್ರೆಂಡ್ಸ್ ಮಾಡ, ಜನ ಸೇವಾ ಟ್ರಸ್ಟ್ ಉದ್ಯಾವರ ಮಾಡ, ಪಟ್ಟೆ ಫ್ರೆಂಡ್ಸ್ ಕಣ್ವ ತೀರ್ಥ ಸಿ.ಪಿ.ಐ ಕಣ್ವ ತೀರ್ಥ ಬ್ರಾಂಚ್ ಸಮಿತಿ, ಸಿ.ಪಿ.ಐ ಜಿಲ್ಲಾ, ಮಂಜೇಶ್ವರ ಮಂಡಲ ಸಮಿತಿ, ಎ.ಐ.ವೈ. ಎಫ್ ಜಿಲ್ಲಾ, ಮಂಡಲ ಸಮಿತಿ, ಮಾಜಿ ಕಂದಾಯ ಸಚಿವ ಇ. ಚಂದ್ರ ಶೇಖರನ್, ಬಿ.ವಿ ರಾಜನ್, ಸಿ.ಪಿ.ಎಂ ನೇತಾರ ಕೆ.ಆರ್ ಜಯಾನಂದ, ಸಿ.ಪಿ.ಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲು, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ: ಎಸ್. ರಾಮಚಂದ್ರ, ಗಾಢವಾದ ಸಂತಾಪ ಸೂಚಿಸಿದ್ದಾರೆ.