
ಉಪ್ಪಳ: ಕಾಂಬಳೆ ಬಂಬ್ರಾಣ ಪಟ್ಟೆ ನಿವಾಸಿ ಹಿರಿಯ ದೈವ ನರ್ತಕ ಗುರುವ [೬೫] ಒಂದು ತಿಂಗಳ ಅನಾರೋಗ್ಯದಿಂದ ಸ್ವಗೃದಲ್ಲಿ ನಿಧನರಾದರು. ಇವರು ಹಲವು ವರ್ಷಗಳಿಂದ ದೈವ ನರ್ತಕರಾಗಿ ಸೇವೆಗೈಯುತ್ತಿದ್ದರು. ಬಂಬ್ರಾಣ ಸಹಿತ ವಿವಿಧ ದೈವಸ್ಥಾನಗಳಲ್ಲಿ ಶ್ರೀ ಧೂಮಾವತೀ, ಅಣ್ಣಪ್ಪ ಪಂಜುರ್ಲಿ, ಕೋಮಾರು ಚಾಮುಂಡಿ ಮೊದಲಾದ ದೈವಗಳ ನರ್ತಕರಾಗಿದ್ದಾರೆ. ಮೃತರು ಪತ್ನಿ ಶೀಲಾ, ಮಕ್ಕಳಾದ ರವಿ, ಪದ್ಮನಾಭ, ಸುಧಾ, ಅಳಿಯ ಶಿವಪ್ರಸಾದ್, ಸಹೋದರಾದ ಚೋಮ, ಬಾಬು, ಐತ್ತಪ್ಪ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ತಂದೆ ಕೊರಗ, ತಾಯಿ ಲಿಂಗು ಈ ಹಿಂದೆ ನಿಧನರಾಗಿದ್ದಾರೆ.