ಸಾಲೂರು ಮಠದ ಹಿರಿಯ ಶ್ರೀಗಳು ಲಿಂಗೈಕ್ಯ

Share with

ಚಾಮರಾಜನಗರ ಜಿಲ್ಲೆ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಹಿರಿಯ ಶ್ರೀ ಗುರು ಸ್ವಾಮೀಜಿ ಇಂದು ಲಿಂಗೈಕ್ಯರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲ ದಿನಗಳ ಹಿಂದಷ್ಟೇ ಮರಳಿದ್ದರು.

ಇಂದು ಸಂಜೆ 5.30ಕ್ಕೆ ಸಾಲೂರು ಮಠದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಹನೂರು ತಾಲೂಕಿನ ಜಿಕೆ ಹೊಸೂರು ಗ್ರಾಮದಲ್ಲಿ ತಂದೆ ರುದ್ರಪ್ಪ, ತಾಯಿ ಪುಟ್ಟ ಮಾದಮ್ಮ ಅವರ ಪುತ್ರರಾಗಿ 1956 ಆ. 2 ರಂದು ಅವರು ಜನಿಸಿದ್ದರು. 1995ರ ಜ. 26ರಂದು ಪೀಠಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು


Share with