ಪೈವಳಿಕೆ: ಚಿಪ್ಪಾರ್ ಶಿರಂತಡ್ಕ ಬಳಿಯ ಬದಿಮೂಲೆ ನಿವಾಸಿ ಮುಸ್ಲಿಂಲೀಗ್‌ನ ಹಿರಿಯ ಮುಖಂಡ, ಸಾಮಾಜಿಕ ಕಾರ್ಯಕರ್ತ ಅಂದುಞÂ ಹಾಜಿ [೬೪] ಬುಧವಾರ ರಾತ್ರಿ ಹೃದಯಘಾತದಿಂದ ನಿಧನರಾರು. ಇವರು ಮುಸ್ಲಿಂಲೀಗ್ ಮಂಜೇಶ್ವರ ಮಂಡಲ ಸಮಿತಿ ಉಪಾಧ್ಯಾಕ್ಷ, ಜಿಲ್ಲಾ ಕೌನ್ಸಿಲ್ ಸಮಿತಿ ಸದಸ್ಯ, ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ, ಶಿರಂತಡ್ಕ ಜುಮಾ ಮಸೀದಿ ಅಧ್ಯಕ್ಷರಾಗಿದ್ದಾರೆ. ಮೃತರು ಪತ್ನಿ ಜೈನಾಭ, ಮಕ್ಕಳಾದ ಇಬ್ರಾಹಿಂ ಬಾತಿಷ, ಮೊಹಮ್ಮದ್ ಬಾಸಿಲ್, ಆಯಿಷತ್ ಬಾಸಿಲ, ಫಾತಿಮ್ಮ, ಡಾ.ಕದೀಜತ್ ಫಾಯಿಮ, ಅಳಿಯ ನಾಸರ್ ನಾಟೆಕಲ್, ಅನೀಶ್ ಆದೂರು, ಸೊಸೆ ಸಿಯಾ ಸುನೀಸ [ಪೈವಳಿಕೆ ಪಂಚಾಯತ್ ಸದಸ್ಯೆ], ಸಹೋದರಿಯರಾದ ಫಾತಿಮ್ಮ, ಮಿಸ್ರಿಯಾ, ರುಕಿಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.