ಸೆ.29-ಅ.2: ಕೊಂಡೆವೂರು ಮಠದಲ್ಲಿ ಶಾರದಾ ಪ್ರತಿಷ್ಠೆ ಮತ್ತು ಸರಸ್ವತೀ ಹವನ

Share with

ಉಪ್ಪಳ : ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ನವರಾತ್ರೋತ್ಸವದ 8 ನೇ ದಿನ 29.09.2025 ಸೋಮವಾರ ಬೆಳಿಗ್ಗೆ 7:30ಕ್ಕೆ ಶ್ರೀ ಶಾರದಾ ಪ್ರತಿಷ್ಠೆ ನಡೆಯಲಿದೆ.

ಬಳಿಕ 9:00 ಕ್ಕೆ ವಿದ್ಯಾರ್ಥಿಗಳ ವಿದ್ಯಾಭ್ಯುದಯಕ್ಕಾಗಿ ಸರಸ್ವತೀ ಹವನ, 30.09.2025 ಮಂಗಳವಾರ ದುರ್ಗಾಷ್ಟಮಿ. ತಾ 01.10.2025 ಬುಧವಾರ ಮಹಾನವಮಿ ಆಯುಧ ಪೂಜೆ, ವಾಹನ ಪೂಜೆ, ಪೂರ್ವಾಹ್ನ ಪೂಜೆಯ ನಂತರ ನಡೆಯಲಿರುವುದು. ಬಳಿಕ “ನಾದ ನಿನಾದ” ಸಂಗೀತ ಕ್ಷೇತ್ರ ಕೊಂಡೆವೂರು ಇದರ ವಿದ್ಯಾರ್ಥಿಗಳಿಂದ ಶ್ರೀ ದೇವರಿಗೆ ಸಂಗೀತಾರ್ಚನೆ. 02.10.2025 ಗುರುವಾರ ವಿಜಯದಶಮೀ ಪ್ರಾತಃ 5:30 ರಿಂದ ಶ್ರೀ ಗಾಯತ್ರೀ ಮಾತೆಗೆ ವಿಶೇಷ ಸೀಯಾಳ ಅಭಿಷೇಕ, 7:30 ಕ್ಕೆ ತೆನೆಪೂಜೆ, ನಂತರ 8:00ಕ್ಕೆ ವಿದ್ಯಾರಂಭನಡೆಯಲಿರುವುದು. ಬಳಿಕ ಪೂರ್ವಾಹ್ನ 10:30 ರಿಂದ ಸವಿಜೀವನಂ ನೃತ್ಯ ಕಲಾಕ್ಷೇತ್ರ ಕೊಂಡೆವೂರು ಇದರ ವಿದ್ಯಾರ್ಥಿಗಳಿಂದ ‘ನಾಟ್ಯನಮನ’. ಮಧ್ಯಾಹ್ನ 12:30 ಕ್ಕೆ ಮಹಾಪೂಜೆ, ಬಳಿಕ ಶ್ರೀ ಮಠದ ಆನಂದತೀರ್ಥ ಪುಷ್ಕರಣಿಯಲ್ಲಿ ವಾದ್ಯಘೋಷಗಳ ಮೂಲಕ ಭವ್ಯ ಮೆರವಣಿಗೆಯೊಂದಿಗೆ ಶಾರದಾ ವಿಸರ್ಜನೆ, ನಂತರ ಮಹಾಮಂತ್ರಾಕ್ಷತೆ ನಡೆಯಲಿರುವುದು. ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *