ಕಾಸರಗೋಡು: ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘ ಮಧೂರು ಘಟಕದ 10ನೇ ವರ್ಷದ ಮಹಾಸಭೆ ಸೆ.3ರಂದು ಭಾನುವಾರ ರಾಮದಾಸನಗರದಲ್ಲಿರುವ ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಸಭಾಂಗಣದಲ್ಲಿ ಜರಗಲಿದೆ. ಕಾರ್ಯಕ್ರಮವನ್ನು ಕಾಸರಗೋಡು ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಅಧ್ಯಕ್ಷ ಶ್ರೀ ಕೃಷ್ಣಾರವರು ಉದ್ಘಾಟಿಸಲಿದ್ದಾರೆ. ಮಧೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ಮಾಲತಿ ಸುರೇಶ್ ಶುಭಾಶಂಸನೆ ನೀಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಾರಾಯಣ ಪೂಜಾರಿ ಪುತ್ತೂರು ಕೊಟ್ಯ, ಸಂಜೀವ ಪೂಜಾರಿ ಪಳ್ಳದ ಕೊಟ್ಯ, ಆಣಂಗೂರು ಶ್ರೀ ಧೂಮಾವತಿ ಸ್ಥಾನದ ಮಂಜುನಾಥ ಪೂಜಾರಿ, ಅಂಬಾರು ತರವಾಡು ಪೂಜಾರಿ ವೀರಪ್ಪ ಅಂಬಾರು ಉಪಸ್ಥಿತರಿರಲಿದ್ದಾರೆ ಎಂದು ಬಿಲ್ಲವ ಸೇವಾ ಸಂಘ ಮಧೂರು ಘಟಕದ ಅಧ್ಯಕ್ಷ ಹರಿದಾಸ ಕಾಂತಿಕೆರೆ, ಪ್ರಧಾನ ಕಾರ್ಯದರ್ಶಿ ಮೋಹನ ಸುವರ್ಣ ಕೂಡ್ಲು, ಕೋಶಾಧಿಕಾರಿ ಉಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುಸ್ತಕ ವಿತರಣೆ: ಇದೇ ಸಂದರ್ಭದಲ್ಲಿ ಮಧೂರು ಗ್ರಾಮ ಪಂಚಾಯತ್ತಿನ ಬಿಲ್ಲವ ಸಮುದಾಯದ 1 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಪುಸ್ತಕ ವಿತರಣೆ ನಡೆಯಲಿದೆ.