ಸೆ.10: ಕಣ್ಣೂರು ಧೂಮಾವತೀ ಆರ್ಟ್ಸ್‌&‌ ಸ್ಪೋರ್ಟ್ಸ್‌ ಕ್ಲಬ್‌ನಿಂದ ಮೊಸರು ಕುಡಿಕೆ ಉತ್ಸವ

Share with

ಕಾಸರಗೋಡು: ಕಣ್ಣೂರು ಧೂಮಾವತೀ ಆರ್ಟ್ಸ್‌&‌ ಸ್ಪೋರ್ಟ್ಸ್‌ ಕ್ಲಬ್‌ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 8 ನೇ ವರ್ಷದ ಮೊಸರು ಕುಡಿಕೆ ಉತ್ಸವವನ್ನು ಸೆ.10ರಂದು ಆಯೋಜನೆ ಮಾಡಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕೋರಿತ್ತಲ ಕಣ್ಣೂರು ಕುಶಾಲಪ್ಪ ಪೂಜಾರಿಯವರು ನೆರವೇರಿಸಲಿದ್ದಾರೆ.

ಸ್ಪರ್ಧೆಗಳು:- ಪುಟಾಣಿ ಮಕ್ಕಳಿಗೆ ಛದ್ಮವೇಷ, ಬಾಳೆಗಿಡ ಹತ್ತುವುದು, ಸಂಗೀತ ಕುರ್ಚಿ, ಮೊಸರು ಕುಡಿಕೆ, ಬಾಟಲಿಗೆ ನೀರು ತುಂಬಿಸುವುದು, ಸೂಜಿಗೆ ನೂಲು ಹಾಕುವುದು, ಲಿಂಬೆ ಚಮಚ ಓಟ, ಮಹಿಳೆಯರಿಗೆ ಮಡಿಕೆ ಹೊಡೆಯುವುದು, ಹಗ್ಗಜಗ್ಗಾಟ, ರಸ್ತೆ ಓಟ, ಅಡಿಕೆ ಹೆಕ್ಕುವುದು, ಕಂಬ ಓಟ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿದೆ. ಸ್ಪರ್ಧೆಯಲ್ಲಿ ಪುಟಾಣಿಗಳು, ಮಕ್ಕಳು, ಪುರುಷರಿಗೆ, ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗಾಗಿ ಸ್ಪರ್ಧೆಗಳನ್ನು ಪ್ರತ್ಯೇಕಿಸಲಾಗಿದೆ.

ಸಮಾರೋಪ:- ಸಮಾರೋಪದ ಅಧ್ಯಕ್ಷತೆಯನ್ನು ಧೂಮಾವತೀ ಆರ್ಟ್ಸ್&ಸ್ಪೋರ್ಟ್ಸ್‌ ಕ್ಲಬ್‌ನ ಅಧ್ಯಕ್ಷ ಸನತ್‌ ಕುಮಾರ್‌ ವಹಿಸಲಿದ್ದಾರೆ. ಬಾಲ ಗೋಕುಲ ಹಿರಿಯ ಕಾರ್ಯಕರ್ತ ಶಂಕರನಾರಾಯಣ ಭಟ್ ಮನ್ನಿಪ್ಪಾಡಿಯವರು ಧಾರ್ಮಿಕ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಣ್ಣೂರು ವಾರ್ಡ್‌ ಸದಸ್ಯ ಜನಾರ್ದನ ಕಣ್ಣೂರು, ಪುಳ್ಯೂರು ಮಹಾದೇವ ದೇವಸ್ಥಾನದ ಕಾರ್ಯದರ್ಶಿ ಮೋಹನ ಶೆಟ್ಟಿ ಸಿರಿಬಾಗಿಲು ಉಪಸ್ಥಿತರಿರಲಿದ್ದಾರೆ. ಪ್ರಸಿದ್ಧ ಜ್ಯೋತಿಷ್ಯ ಮೋಹನ ಪೂಜಾರಿ ಮಾಯಿಪ್ಪಾಡಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ.

ಭೋಜನದ ವ್ಯವಸ್ಥೆ:– ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಜ್ಯೋತಿಷ್ಯ ಮೋಹನ ಪೂಜಾರಿ ಮಾಯಿಪ್ಪಾಡಿ, ರಘುರಾಮ ಪೂಜಾರಿ ಕಣ್ಣೂರುರವರು ನೀಡಿ ಸಹಕರಿಸಲಿದ್ದಾರೆ.


Share with

Leave a Reply

Your email address will not be published. Required fields are marked *