ರಾಷ್ಟ್ರೀಯ ಹೆದ್ದಾರಿ ಬಾಗೆ ಬಳಿ ಕಾರು ಅಪಘಾತ ಹಲವರಿಗೆ ಗಾಯ

Share with

ಸಕಲೇಶಪುರ:  ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುವಾಗ ರಾಷ್ಟ್ರೀಯ ಹೆದ್ದಾರಿ-75 ಬಾಗೆ ಸಮೀಪದ ಅರಸು ನಗರ ಬಳಿ  ಕಾರು ಅಪಘಾತ ಆಗಿದೆ.

ಅತಿಯಾದ ಮಳೆಯಿಂದ ವೀಲ್ ಜಾರಿ  ಡಿವೈಡರ್ ದಾಟಿ ಕಾರು ಪಲ್ಟಿಯಾಗಿದೆ… 2 ಜನರಿಗೆ ಸೀರಿಯಸ್ ಮತ್ತು 4 ಜನರಿಗೆ ಸಾಮಾನ್ಯ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸಾರ್ವಜನಿಕರಲ್ಲಿ ವಿನಂತಿ

ರಾಷ್ಟ್ರೀಯ ಹೆದ್ದಾರಿ-75 ಕಾಂಕ್ರೀಟ್ ರಸ್ತೆಯಾಗಿದ್ದು ಜಾರುವ ಸಾಧ್ಯತೆ ಇದ್ದು ಮಲೆನಾಡಿನಲ್ಲಿ ಜೋರು ಮಳೆಯಾಗುತ್ತಿದ್ದು ವಾಹನ ಸವಾರರು ತಮ್ಮ ವಾಹನಗಳನ್ನು ಅತಿ ವೇಗವಾಗಿ ಚಾಲನೆ ಮಾಡುತ್ತಿರುವುದರಿಂದ  ತಮ್ಮ ಕಂಟ್ರೋಲ್‌ ಗೆ‌ ಸಿಗುತ್ತಿಲ್ಲ ಹಾಗಾಗಿ ಈ ತರ ಘಟನೆಗಳು ಸಂಭವಿಸುತ್ತಿವೆ ಆದ್ದರಿಂದ ವಾಹನಗಳನ್ನು ಜಾಗರೂಕತೆಯಿಂದ ನಿಧಾನವಾಗಿ ಚಲಾಯಿಸಬೇಕೆoದು ಮನವಿ ಮಾಡಲಾಗಿದೆ.


Share with

Tags:

Leave a Reply

Your email address will not be published. Required fields are marked *