ಉಪ್ಪಳ: ಐಲ ಶಿವಾಜಿನಗರದಲ್ಲಿ ಕಡಲ್ಕೊರೆತ ವ್ಯಾಪಕಗೊಡಿದ್ದು, ಹಲವಾರು ಗಾಳಿ ಮರಗಳು ಸಮುದ್ರಪಾಲದ ಘಟನೆ ನಡೆದಿದೆ. ಹಲವು ದಿನಗಳಿಂದ ಆರಂಭಗೊoಡ ಕಡಲ್ಕೊರೆತ ಮುಂದುವರಿಯುತ್ತಿದ್ದು, ಸ್ಥಳೀಯರು ಆತಂಕಗೊoಡಿದ್ದಾರೆ. ಈಗೆ ಮುಂದುವರಿದಲ್ಲಿ ಪರಿಸರದ ರಸ್ತೆ , ವಿದ್ಯುತ್ ಕಂಬಗಳು, ಸಮುದ್ರಪಾಲಾಗಿ ಮನೆಗಳಿಗೂ ಅಪಾಯ ಉಂಟಾಗಲಿದೆ. ಕಳೆದ ವರ್ಷ ಕೂಡಾ ನೂರಾರು ಗಾಳಿ ಮರಗಳು ಸಮುದ್ರ ಪಾಲಾಗಿದೆ. ಮೀನು ಕಾರ್ಮಿಕರು ಆತಂಕದಿoದಲೇ ದಿನಕಳೆಯುವಂತಾಗಿದೆ. ಈ ಪರಿಸರದಲ್ಲಿ ತಡೆಗೋಡೆ ನಿರ್ಮಿಸಲು ಹಲವು ವರ್ಷಗಳಿದ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ಇತ್ತಕಡೆ ಗಮನ ಹರಿಸುತ್ತಿಲ್ಲವೆಂದು ಮೀನು ಕಾರ್ಮಿಕರು ದೂರಿದ್ದಾರೆ. ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸುವ ಬಗ್ಗೆ ಸಂಬoಧಪಟ್ಟ ಅಧಿಕಾರಿ ವರ್ಗ ಮುಜುವರ್ಜಿ ವಹಿಸಬೇಕೆಂದು ಆಗ್ರಹಿಸಿದ್ದಾರೆ.