kasaragod: ರಾಜ್ಯದಲ್ಲಿ ಕೆಲವು ಸ್ಥಳಗಳಲ್ಲಿ ಅತಿ ತೀವ್ರ ಮಳೆಯ ಸಾಧ್ಯತೆಯಿರುವುದರಿಂದ ಇಂದು(ಆ.3 ರಂದು) ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಆರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ. ಇಂದು ಕೊಟ್ಟಯಾಮ್, ಇಡುಕ್ಕಿ, ಆಲಾಪುಜ್ಜಾ ಮತ್ತು ಏರ್ನಾಕುಲಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದೆ. ತಿರುವನಂತಪುರಂ, ಕೊಚ್ಚಿ, ಪಥನಮ್ತಿಟ್ಟ, ತ್ರಿಶೂರು, ಪಾಲಕ್ಕಾಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಜಾರಿಯಲ್ಲಿದೆ. ರಾಜ್ಯದಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿಯ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ನಾಳೆ(ಆ.4) ಇಡುಕ್ಕಿ, ಎರ್ನಾಕುಲಂ, ತ್ರಿಸೂರ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರಂ, ಕೊಳ್ಳಂ, ಪತ್ತನಮ್ಥಿಟ್ಟ, ಕೊಟ್ಟಾಯಮ್, ಪಾಲಕಾಡ್, ಮಲಪ್ಪುರಂ, ಕೊಝಿಕೋಡ್, ವಯನಾಡ್, ಕಣ್ಣೂರು, ಕಾಸರಗೋಡ್ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

24 ಗಂಟೆಗಳಲ್ಲಿ 115.6 ಮಿ.ಮೀ ನಿಂದ 204.4 ಮಿ.ಮೀವರೆಗೆ ಮಳೆಯಾಗುವ ಸಾಧ್ಯತೆ ಇರುವುದರಿಂದ, ಈ ಪ್ರಮಾಣದ ಮಳೆಯನ್ನೇ ಭಾರತೀಯ ಹವಾಮಾನ ಇಲಾಖೆ “ಅತಿಶಕ್ತ ಮಳೆ” ಎಂದು ವರ್ಣಿಸಿದೆ.




