ನಗರಸಭಾ ಅಧ್ಯಕ್ಷೆಯಾಗಿ ಶಾಹಿನಾ ಸಲೀಂ, ಉಪಾಧ್ಯಕ್ಷರಾಗಿ ಕೆ.ಎಂ. ಹನೀಫ ಆಯ್ಕೆ

Share with

ಕಾಸರಗೋಡು: ಕಾಸರಗೋಡು ನಗರಸಭೆಯ ನೂತನ ಅಧ್ಯಕ್ಷೆಯಾಗಿ ಮುಸ್ಲಿಂ ಲೀಗ್ ನ ಶಾಹಿನಾ ಸಲೀಂ ಆಯ್ಕೆಗೊಂಡಿದ್ದಾರೆ. ಶಾಹಿನಾ ಎಂಬಿಎ ಪದವೀಧರೆಯಾಗಿದ್ದು 2015ರಲ್ಲಿ ಚೆಂಗಳ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ. ಹತ್ತು ವರ್ಷಗಳ ಹಿಂದೆ ಇವರು ಚೆಂಗಳ ಪಂಚಾಯತ್‌ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ ಇವರ ತಂದೆ ಕಲ್ಲೆಟ್ರಾ ಅಬ್ದುಲ್ ಖಾದರ್ ನೆರೆಯ ಚೆಮ್ಮಾಡ್ ಪಂಚಾಯತ್ ಅಧ್ಯಕ್ಷರಾಗಿದ್ದರು. ಕಾಸರಗೋಡು ನಗರಸಭೆಯ ಅಧ್ಯಕ್ಷ ಸ್ಥಾನ ವಹಿಸುತ್ತಿರುವ ಎರಡನೇ ಮಹಿಳೆಯಾಗಿದ್ದಾರೆ. 2005-10 ಮತ್ತು 2015-20ರ ಅವಧಿಯಲ್ಲಿ ಬೀಫಾತಿಮ್ಮ ಇಬ್ರಾಹಿಂ ಕಾಸರಗೋಡು ನಗರಸಭೆಯ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಕಾಸರಗೋಡು ನಗರಸಭೆಯ 16ನೇ ವಾರ್ಡ್‌ ಆಗಿರುವ ತುರ್ತಿಯಿಂದ ಶಾಹಿನಾ ಸಲೀಂ ಗೆಲುವು ಸಾಧಿಸಿ ನಗರಸಭಾ ಅಧ್ಯಕ್ಷೆ ಸ್ಥಾನಕ್ಕೇರಿದ್ದಾರೆ.

ಡಿ.26ರಂದು ನಡೆದ ಚುನಾವಣೆಯಲ್ಲಿ ಶಾಹಿನಾ ಸಲೀಂ 24 ಮತ ಪಡೆದು ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಂಡರು. ಇವರ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಿದ ಬಿಜೆಪಿ ಶಾರದಾರಿಗೆ 12 ಮತಗಳು ಲಭಿಸಿವೆ. ಸಿಪಿಎನ ಇಬ್ಬರು ಹಾಗೂ ಓರ್ವ ಪಕ್ಷೇತರ ಕೌನ್ಸಿಲರ್ ಮತದಾನದಿಂದ ಹಿಂದಕ್ಕೆ ಸರಿದಿದ್ದರು. ಕಾಸರಗೋಡು ನಗರಸಭೆಯಲ್ಲಿ ಒಟ್ಟು 39 ಸದಸ್ಯರ ಬಲ ಹೊಂದಿದೆ. ನಗರಸಭೆಯ ಮುಸ್ಲಿಂ ಲೀಗ್ ಉಪಾಧ್ಯಕ್ಷರಾಗಿ ಕೆ.ಎಂ. ಹನೀಫ ಆಯ್ಕೆಗೊಂಡರು.

ಇವರಿಬ್ಬರು ಡಿ.26ರಂದು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು.


Share with

Leave a Reply

Your email address will not be published. Required fields are marked *