ಬಂಗ್ರಮoಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರೋತ್ಸವ ಅ.3ರಿಂದ 12ರ ತನಕ 5ರಂದು ಚಂಡಿಕಾ ಹೋಮ

Share with


ಮಂಜೇಶ್ವರ: ಬ್ರಂಗಮoಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಸನ್ನಿದೌ ಶರನ್ನವರಾತ್ರೋತ್ಸವ ಅಕ್ಟೋಬರ್ 3ರಿಂದ 12ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೇಯಲಿದೆ. 3ರಂದು ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಮಧ್ಯಾಹ್ನ ಪೂಜೆ, ಸಂತರ್ಪಣೆ, 4ರಂದು ಮಧ್ಯಾಹ್ನ ಪೂಜೆ, ಸಂತರ್ಪಣೆ, 5ರಂದು ಬೆಳಿಗ್ಗೆ 8ರಿಂದ ಚಂಡಿಕಾ ಹೋಮ ಪ್ರಾರಂಭ, ಮಧ್ಯಾಹ್ನ ಪೂಜೆ, ಸಂತರ್ಪಣೆ, ಮಧ್ಯಾಹ್ನ 1ಕ್ಕೆ ಶ್ರೀ ವಿಷ್ಣು ಯಕ್ಷ ಬಳಗ ಮಜಿಬೈಲು ಇವರಿಂದ ಯಕ್ಷಗಾನ ತಾಳಮದ್ದಳೆ, 6ರಂದು ಗಣಹೋಮ, ಬೆಳಿಗ್ಗೆ 10.30ಕ್ಕೆ ಶ್ರೀ ಕಾಳಿಕಾಪರಮೇಶ್ವರೀ ಮಹಿಳಾಸಂಘದ ಮಹಾಸಭೆ, ಮಧ್ಯಾಹ್ನ ಪೂಜೆ, ಸಂತರ್ಪಣೆ, ಅದೇ ದಿನ ಓಜ ಸಹಿತ್ಯ ಕೂಟದ ವತಿಯಿಂದ ಕ್ರೀಡೋತ್ಸವ ಜರಗಲಿದೆ. 7ರಂದು ಲಲಿತಾ ಪಂಚಮಿ, ಮಧ್ಯಾಹ್ನ ಪೂಜೆ, ಸಂತರ್ಪಣೆ, 8ರಂದು ಮಧ್ಯಾಹ್ನ ಪೂಜೆ, ಸಂತರ್ಪಣೆ, 9ರಂದು ಚೂತ ಪಲ್ಲವಾದಿ , ಓಷಧಿ ಮೂಲಿಕಾ ಆಹ್ವಾನ, ಮೂಲನಕ್ಷತ್ರ, ಮಧ್ಯಾಹ್ನ ಪೂಜೆ, ಸರಸ್ವತಿ ಪೂಜೆ, ಹೊಸ ಅಕ್ಕಿ ಸಮರ್ಪಣೆ, 10ರಂದು ದುರ್ಗಾಪೂಜೆ, ಮಧ್ಯಾಹ್ನ ಪೂಜೆ, ಸಂತರ್ಪಣೆ, 11ರಂದು ಆಯುಧ ಪೂಜೆ, ಮಧ್ಯಾಹ್ನ ಪೂಜೆ, ಸಂತರ್ಪಣೆ, 12ರಂದು ಪೂರ್ವಾಹ್ನ 10.30ಕ್ಕೆ ಮಹಾಸಭೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ರಾತ್ರಿ 7ಕ್ಕೆ ಮಹಾಪೂಜೆ, ಗುಳಿಗ ದೈವದ ತಂಬಿಲ, ಶ್ರೀದೇವರಿಗೆ ಪಲ್ಲಕ್ಕಿ ಉತ್ಸವ, ಶ್ರೀ ಆದಿ ಕ್ಷೇತ್ರಕ್ಕೆ ಭೇಟಿ, ವಸಂತ ಮಂಟಪದಲ್ಲಿ ಅಷ್ಟಾವಧಾನ, ಆಲಯ ಪ್ರವೇಷ, ಬ್ರಹ್ಮಾರ್ಪಣೆ, ಮಹಾಪ್ರಸಾದ ನಡೆಯಲಿದೆ. ಉತ್ಸವದ ದಿನಗಳಲ್ಲಿ ಓಜ ಸಾಹಿತ್ಯ ಕೂಟ ಹಾಗೂ ಶ್ರೀ ಕಾಳಿಕಾಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘದ ವತಿಯಿಂದ ಭಜನೆ, ದೇವೀ ಪಾರಾಯಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.


Share with

Leave a Reply

Your email address will not be published. Required fields are marked *