ತುಳು ಚಿತ್ರ ನಿರ್ಮಾಣಕ್ಕಿಳಿದ ʼಶಿಲ್ಪಾ ಗಣೇಶ್ʼ..!‌ ನಾಯಕ ನಟನಾಗಿ ಕಾಣಿಸಲಿದ್ದಾರೆ ಕರಾವಳಿಯ ರಾಜಕೀಯ ಮುಖಂಡನ ಪುತ್ರ..!

Share with

ಮಣಿಪಾಲ: ತುಳು ಚಿತ್ರ ರಂಗ ಇದೀಗ ಭಿನ್ನ ಸಿನಿಮಾಗಳ ಮೂಲಕ ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ. ಇತ್ತೀಚೆಗೆಯಷ್ಟೇ ತುಳು ಸಿನಿಮಾವು ಸ್ಯಾಟಲೈಟ್ ರೈಟ್ಸ್ ಪಡೆದು ಕನ್ನಡ ವಾಹಿನಿಯಲ್ಲೂ ಪ್ರದರ್ಶನವಾಗಿತ್ತು. ಬೆಳೆಯುತ್ತಿರುವ ತುಳು ಸಿನಿಮಾ ಇಂಡಸ್ಟ್ರಿಗೆ ಇದೀಗ ಕನ್ನಡದ ಗೋಲ್ಡನ್ ಸ್ಟಾರ್ ಹೆಜ್ಜೆ ಇಟ್ಟಿದ್ದಾರೆ.‌

ಹೌದು, ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರ ಪತ್ನಿ ಶಿಲ್ಪಾ ಗಣೇಶ್ (Shilpa Ganesh) ಅವರು ತುಳು ಸಿನಿಮಾವೊಂದಕ್ಕೆ ಬಂಡವಾಳ ಹೂಡಲು ಮುಂದಾಗಿದ್ದಾರೆ. ಕರಾವಳಿಯವರಾದ ಶಿಲ್ಪಾ ಗಣೇಶ್ ಅವರು ತುಳು ಸಿನಿಮಾ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದ್ದಾರೆ.

ಶಿಲ್ಪಾ ಗಣೇಶ್ ನಿರ್ಮಾಣದ ಮೊದಲ ತುಳು ಚಿತ್ರಕ್ಕೆ ಸಂದೀಪ್ ಬೆದ್ರ ಆಕ್ಷನ್ ಕಟ್ ಹೇಳಲಿದ್ದಾರೆ. ಸಿನಿಮಾಗೆ ಕಥೆ ಮತ್ತು ಚಿತ್ರಕಥೆಯನ್ನು ಮೋಹನ್ ಭಟ್ಕಳ್ ಬರೆದಿದ್ದಾರೆ. ಸ್ಯಾಂಡಲ್ ವುಡ್ ನ ಖ್ಯಾತ ಸಿನಿಮಾಟೋಗ್ರಾಫರ್ ಸಂತೋಶ್ ರೈ ಪತಾಜೆ ಅವರ ಕ್ಯಾಮರಾ ಕೈಚಳಕ ಈ ಸಿನಿಮಾಗೆ ಇರಲಿದೆ.

ಕರಾವಳಿಯ ರಾಜಕೀಯ ಧುರೀಣ ಹರಿಕೃಷ್ಣ ಬಂಟ್ವಾಳ ಅವರ ಪುತ್ರ ನಿತ್ಯಪ್ರಕಾಶ್ ಬಂಟ್ವಾಳ ಈ ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ. ನಾಯಕ ನಟಿ ಇನ್ನಷ್ಟೇ ಅಂತಿಮವಾಗಬೇಕಿದೆ. ತುಳು ಚಿತ್ರರಂಗದ ಹಲವು ಕಲಾವಿದರು ಇದರಲ್ಲಿ ನಟಿಸಲಿದ್ದಾರೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಡಿಸೆಂಬರ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ.


Share with

Leave a Reply

Your email address will not be published. Required fields are marked *