ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಲಾಗಿದೆ.
ಶಿವಮೊಗ್ಗ ಎಸ್.ಪಿ ಜಿ.ಕೆ ಮಿಥುನ್ ಕುಮಾರ್ ಸಲ್ಲಿಸಿದ ವರದಿ ಆಧರಿಸಿ, ರಾಗಿಗುಡ್ಡ ಗಲಾಟೆ ನಿಭಾಯಿಸಲು ವಿಫಲವಾದ ಹಿನ್ನಲೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಅವರು ಪೋಲಿಸ್ ಠಾಣಾಧಿಕಾರಿ ಅಭಯ ಪ್ರಕಾಶ್ ಸೇರಿ ಕಾನ್ಸ್ಟೇಬಲ್ಗಳಾದ ಕಾಶಿನಾಥ್, ರಂಗನಾಥ್ ಹಾಗೂ ಶಿವರಾಜ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.