ಹಿಂದಿ ಪರೀಕ್ಷೆ ಕಡ್ಡಾಯವಲ್ಲ ಎಂಬ ಸರ್ಕಾರದ ನಿರ್ಧಾರದ ವಿಚಾರಕ್ಕೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಭಾಷೆ ಕಲಿಯುವಂತದ್ದು ಅದು ಹೇರಿಕೆ ಅಲ್ಲ.

ಯಾರ ಮಾತು ಕೇಳಿ ಹಿಂದಿ ಭಾಷೆ ತೆಗೆದಿದ್ದೀರಿ? ವರ್ಷಪೂರ್ತಿ ವಿದ್ಯಾರ್ಥಿಗಳು ಹಿಂದಿ ಕಲಿತಿರುತ್ತಾರೆ. ಆದರೆ ಸರ್ಕಾರ ಪರೀಕ್ಷೆ ಶುರುವಾದಾಗ ಹಿಂದಿ ಕಡ್ಡಾಯ ಅಲ್ಲ ಎಂದಿದೆ. ಒಂದು ವರ್ಷ ಕಲಿತ ಮೇಲೆ ಪರೀಕ್ಷೆ ಬೇಡ ಅಂದರೆ ಹೇಗೆ? ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.




