ಗರ್ಭಿಣಿ ಮಹಿಳೆಯರಿಗೆ ಹಲವು ಸಂದೇಹಗಳು ಮನಸ್ಸಲ್ಲಿ ಮೂಡುತ್ತಿರುತ್ತವೆ. ಗರ್ಭಾವಸ್ಥೆಯಲ್ಲಿ ಚಹಾ, ಕಾಫಿ ಕುಡಿಯುವುದರಿಂದ ಮಗುವಿನ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಆದರೆ ಇದು ತಲೆಮಾರುಗಳಿಂದ ಬಂದಿರುವ ಒಂದು ತಪ್ಪು ಕಲ್ಪನೆ.

ಗರ್ಭಾವಸ್ಥೆಯಲ್ಲಿ ಚಹಾ ಮತ್ತು ಕಾಫಿ ಕುಡಿಯುವುದರಿಂದ ಮಗುವಿಗೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಆದರೆ ಅತಿಯಾಗಿ ಚಹಾ ಅಥವಾ ಕಾಫಿ ಕುಡಿಯದಿರುವುದು ಉತ್ತಮ ಎಂಬುದು ವೈದ್ಯರ ಸಲಹೆ.




